
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾನು ಮುಷ್ತಾಕ್ ಅವರನ್ನ ಚಾಮುಂಡಿ ಬೆಟ್ಟ ಹತ್ತಬಾರದು ಅಂತಾರೆ. ಪೂಜೆ ಮಾಡಬಾರದು ಅಂತಾರೆ. ನನಗೆ ಅರ್ಥ ಆಗಲ್ಲ. ನಾವು ಜಾತ್ಯಾತೀತ ವ್ಯವಸ್ಥೆಯಲ್ಲಿ ಇದ್ದೇವೆ. ಸಂವಿಧಾನ ಸಮಾನತೆ ಅಂತ ಹೇಳುತ್ತದೆ. ಅಂಬೇಡ್ಕರ್ ಇದನ್ನೇ ಹೇಳುತ್ತಾರೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನ ಸಮಾಜ ಖಂಡಿಸಬೇಕು. ಮಾಜಿ ಲೋಕಸಭೆ ಸದಸ್ಯನಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನು ಹೇಳಬೇಕು ಅವನನ್ನ? ಮೂರ್ಖ ಅಂತ ಕರೆಯಬೇಕು. ಇಂತಹ ಮೂರ್ಖರು ನಮ್ನ ದೇಶದಲ್ಲಿ ಇದ್ದಾರೆ. ಇಂತಹ ಮೂರ್ಖರ ಬಗ್ಗೆ ಮಾತಾಡೋದು ಬೇಡ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.


































