
ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ತಿಂಗಳ ಕಾರ್ಯಕ್ರಮದಡಿಯಲ್ಲಿ ಕಾರ್ಕಳದ ಶ್ರೀಮತಿ ರಾಧಿಕಾ ಶೆಣೈ ಅವರಿಂದ “ಸ್ವಗತ ” ಶೀರ್ಷಿಕೆಯ ಲೇಖನ ಮತ್ತು ಪ್ರಕೃತಿಯ ಕುರಿತಾಗಿ ಕವನವಾಚನ ಕಾರ್ಯಕ್ರಮ ಬೋರ್ಡ್ ಹೈಸ್ಕೂಲಿನಲ್ಲಿ ದಿನಾಂಕ 10.09.2025 ರಂದು ನಡೆಯಿತು.
ಸಂಘಟನೆಯ ಅಧ್ಯಕ್ಷೆ ಪ್ರೊl ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು. ಶ್ರೀಮತಿ ರೂಪ ಚಿಪ್ಲೊಂಕರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಡಾl ಮಾಲತಿ. ಜಿ. ಪೈ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


































