
ಕಾರ್ಕಳ ಸೆ. 9: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ
ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು
ಮಾರ್ಪಾಡುಗಳು ಮತ್ತು ಬದಲಾವಣೆಗಳನ್ನು ಸರಕಾರದೊಂದಿಗೆ
ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ತರ ಪಾತ್ರ
ನಿರ್ವಹಿಸುತ್ತಿದೆ.
ಈ ಸಂಘಟನೆಯು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಂಭಗೊAಡು ಇದೀಗ
ರಾಜ್ಯವ್ಯಾಪಿ ತನ್ನ ಸದಸ್ಯತ್ವವನ್ನು ವಿಸ್ತರಿಸಿಕೊಂಡಿದೆ. ಅಂತೆಯೇ ಬೇರೆ
ಬೇರೆ ಕಾಲೇಜುಗಳ ಸಾರ್ವತ್ರಿಕ ಸಮಸ್ಯೆಗಳು ಎದುರಾದಾಗ
ಕುಪ್ಮಾವು ಸರಕಾರದೊಂದಿಗೆ ಆರೋಗ್ಯಕರವಾದ ಚರ್ಚೆ, ಸಲಹೆ,
ಸೂಚನೆಗಳೊಂದಿಗೆ ಆ ಸಮಸ್ಯೆಯನ್ನು ಬಗೆಹರಿಸುವಲ್ಲಿ
ಯಶಸ್ವೀಯಾಗಿದೆ.
“ಕುಪ್ಮಾ”ದ ರಾಜ್ಯಮಟ್ಟದ ದ್ವಿತೀಯ ಸಮಾವೇಶವು 2025ರ ಸೆಪ್ಟೆಂಬರ್
ತಿAಗಳಲ್ಲಿ ದಿನಾಂಕ 12 ಮತ್ತು 13ರಂದು ‘ಎಸ್. ಎಸ್. ಮಲ್ಲಿಕಾರ್ಜುನ
ಕಲ್ಚರಲ್ ಸೆಂಟರ್’, ಬಿಐಇಟಿ, ದಾವಣಗೆರೆ, ಇಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ
ನಮ್ಮ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಆಡಳಿತ
ಮಂಡಳಿಗಳು ಭಾಗವಹಿಸಬೇಕಾಗಿ “ಕುಪ್ಮಾ” ಈ ಮೂಲಕ
ವಿನಂತಿಕೊAಡಿದೆ.



















