ಕಾರುಣ್ಯ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ

ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಕಾರುಣ್ಯ ವಿಶೇಷ ಶಾಲೆ ಪಡುಕೆರೆ ಮಲ್ಪೆ ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘ ಇದರ ಸಹಯೋಗದಲ್ಲಿ ಕಾರುಣ್ಯ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ ಅಧ್ಯಕ್ಷರಾದ ಲಯನ್ ಜಯಕರ ಶೆಟ್ಟಿ ಇಂದ್ರಾಳಿ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷರಾದ ಲಯನ್ ದಿವಾಕರ್ ಸನಿಲ್, ರಾಷ್ಟ್ರೀಯ ಸಮಿತಿಯ ಸದಸ್ಯರು ಜಯಂಟ್ಸ್ ವೆಲ್ಫೇರ್ ಫೌಂಡೇಶನ್ GT. ದಿನಕರ ಅಮೀನ್, ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಶಿವಾಜಿ, ಲಯನ್ಸ್ ಜಿಲ್ಲೆ 317 ಸಿ ಜಿಲ್ಲಾ ಗವರ್ನರ್ ಲಯನ್ ಸಪ್ನ ಸುರೇಶ್, ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಅಧ್ಯಕ್ಷರಾದ ಡಾ.ಕಾಂತಿ ಹರೀಶ್, ಗೌರವಾಧ್ಯಕ್ಷರಾದ ಆಗ್ನೆಸ್ ಹೇಮಾವತಿ, ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷರಾದ ರವೀಂದ್ರ ಹೆಚ್ ಪಾಲಕರ ಸಂಘದ ಅಧ್ಯಕ್ಷರಾದ ಜಯ ವಿಠ್ಠಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಸುಮಾರು 16 ವಿಶೇಷ ಶಾಲೆಗಳಿಂದ 10 ಮಂದಿ ವಿಶೇಷ ಶಿಕ್ಷಕರನ್ನು ಹಾಗೂ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಶಿಕ್ಷಕೇತರರನ್ನು ಕೂಡ ಗೌರವಿಸಿ ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಧಾಕರ್ ಹೆಗ್ಡೆ, ಅಸಿಸ್ಟಂಟ್ ಗವರ್ನರ್ ಅಲಯನ್ಸ್, ಲಿಯೋ ಕ್ಲಬ್ ಕೋರ್ಡಿನೇಟರ್ ಲಯನ್ ಸಾಧನ ಕಿಣಿ ಲಯನ್ಸ್ ಕ್ಲಬ್ ಮಣಿಪಾಲ ವ್ಯಾಲಿ ಅಧ್ಯಕ್ಷೆ ಲಯನ್ ಭೂಮಿಕಾ ಪಹೂಜಾ, ಫಿಟ್ನೆಸ್ ಟ್ರೈನರ್ ಅಕ್ಷತಾ ರಾವ್, ಭಾಗವಹಿಸಿ ಬಹುಮಾನ ವಿತರಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ಸುಮಾರು 16 ವಿಶೇಷ ಶಾಲೆಗಳಿಂದ ಸುಮಾರು 200 ಜನ ಭಾಗವಹಿಸಿ ಹಾಸ್ಯಮಯ ನೃತ್ಯ ಕಾರ್ಯಕ್ರಮ ಆಶು ಭಾಷಣ ಸಂಗೀತ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲರೂ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀಮತಿ ಶಶಿಕಲಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ಗೌರವಾಧ್ಯಕ್ಷರಾದ ಆಗ್ನೆಸ್ ಹೇಮಾವತಿ ಸ್ವಾಗತಿಸಿ, ರಾಜ್ಯಾಧ್ಯಕ್ಷರಾದ ಡಾ. ಕಾಂತಿ ಹರೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಜಿಲ್ಲಾ ಸಂಘದ ಉಪಾಧ್ಯಕ್ಷೆ ಸಿಸ್ಟರ್ ವಿನ್ನಿ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಿದರು. ಜಿಲ್ಲಾಧ್ಯಕ್ಷ ರವೀಂದ್ರ ಹೆಚ್ ವಂದಿಸಿದರು.
