
ಉಡುಪಿ/ಮಂಗಳೂರು: ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗುವೊಂದನ್ನು ನಾಲ್ಕು ಲಕ್ಷ ರೂ. ಗೆ ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ವೈದ್ಯ ಡಾ.ಸೋಮೇಶ್ ಸೋಲೋಮನ್, ಮಧ್ಯವರ್ತಿ ಮಹಿಳೆ ವಿಜಯಲಕ್ಷ್ಮಿ ಹಾಗೂ ನವನೀತ್ ನಾರಾಯಣ ಎಂಬವರನ್ನು ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಅಂಗನವಾಡಿಯಲ್ಲಿ ಪೋಷಣ್ ಟ್ರ‍್ಯಾಕರ್ ರಿಜಿಸ್ಟರ್ ಸಂದರ್ಭದಲ್ಲಿ ಈ ಮಗು ದಂಪತಿಗಳದ್ದಲ್ಲ ಅನ್ನೋದು ತಿಳಿದುಬಂದಿದ್ದು ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿಯ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದ್ದು ಪೊಲೀಸರ ಮಾಹಿತಿ ಪ್ರಕಾರ, ನವನೀತ್ ನಾರಾಯಣ ಎಂಬಾತ ಮಾನಸಿಕ ವೈಕಲ್ಯದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಗೆ ಮಗುವಾದ ಬಳಿಕ ಉಡುಪಿ ದಂಪತಿಗಳು ಆಸ್ಪತ್ರೆಯಿಂದಲೇ ಮಗುವನ್ನು ಖರೀದಿಸಿದ್ದಾರೆ. ಬಳಿಕ ವಿಜಯಲಕ್ಷ್ಮಿ ಎನ್ನುವ ಮಧ್ಯವರ್ತಿ ಮಹಿಳೆಯ ಮೂಲಕ 4 ಲಕ್ಷ ರೂ.ಯನ್ನು ಪಾವತಿಸಿದ್ದಾರೆ. ಮಗು ಮಾರಾಟದಲ್ಲಿ ವೈದ್ಯ ಡಾ.ಸೋಮೇಶ್ ಸೋಲೋಮನ್ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಉಡುಪಿಯ ಶಿರ್ವ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದು, ಮಗು ಖರೀದಿಸಿದ್ದ ಉಡುಪಿ ದಂಪತಿಗಳ ವಿಚಾರಣೆ



















