
ಬೆಂಗಳೂರು: ನಟಿ ಪವಿತ್ರಾ ಗೌಡ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ತಮ್ಮ ಮಗಳಿಗೆ ಪರೀಕ್ಷೆ ಇರುವ ಕಾರಣ ಜಾಮೀನು ಅರ್ಜಿ ವಜಾ ಮಾಡಬೇಡಿ ಎಂದು ಮನವಿ ಮಾಡಿದ್ದು ಆದರೆ ಇದೀಗ ಜಾಮೀನು ಅರ್ಜಿ ವಜಾ ಆಗಿದೆ.
ಈ ಹಿಂದೆ ಜಾಮೀನು ಸಿಕ್ಕ ಬಳಿಕ ಪವಿತ್ರಾ ಗೌಡ ಅವರು ತಮ್ಮ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ಶಾಪ್‌ನ್ನು ರೀ ಲಾಂಚ್ ಮಾಡಿದ್ದು ಆನ್‌ಲೈನ್ ಡೆಲಿವರಿ ಕೊಡಲು ತಯಾರಿ ನಡೆಸಿದ್ದರು. ಒಂದಷ್ಟು ಫೋಟೋಶೂಟ್ ಕೂಡ ಮಾಡಿಸಿಕೊಂಡು, ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಒಯ್ಯಲು ಪ್ರಯತ್ನಿಸುತ್ತಿದ್ದು ಜೊತೆಗೆ ಮಗಳ ಜೊತೆ ಸಮಯ ಕಳೆಯುತ್ತ, ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. ಇದೀಗ ಜಾಮೀನಿ ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಸೆಷನ್ ಕೋರ್ಟ್ ಆದೇಶ ಹೊರಡಿಸಿದೆ.