
ಬೆಂಗಳೂರು: ಬಂಗಾರಪೇಟೆ ಶಾಸಕರ ಶಿಫಾರಸ್ಸಿನಂತೆ ತಹಶೀಲ್ದಾರ್ ಎಸ್ ವೆಂಕಟೇಶಪ್ಪ ವರ್ಗಾವಣೆ ಮಾಡಲಾಗಿದ್ದು, ಈ ವರ್ಗಾವಣೆಯನ್ನು ರದ್ದುಪಡಿಸಲು ಕರ್ನಾಟಕ ಆಡಳಿತಾತ್ಮಕ ನ್ಯಾಯಪೀಠ ನಿರಾಕರಿಸಿತ್ತು.
ಈ ವಿಚಾರವಾಗಿ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇದೀಗ ಶಾಸಕರ ಶಿಫಾರಸ್ಸಿನ ಮೇಲಿಗೆ ಮಾಡಲಾದ ವರ್ಗಾವಣೆ ಅಮಾನ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಅನುಮತಿ ಪಡೆಯಲಾಗಿದೆ. ಸ್ಥಳೀಯ ನಿವಾಸಿಗಳಿಂದ ದೂರಿನ ಮೇರೆಗೆ ವರ್ಗಾವಣೆ ಮಾಡಲಾಗಿದೆ. ವಿಶೇಷ ಸಂದರ್ಭಗಳಲ್ಲಿ, ಸಿಎಂ ಸಮ್ಮತಿಯೊಂದಿಗೆ ವರ್ಗಾವಣೆಗೆ ಅವಕಾಶವಿದೆಯೆಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್ ಜಿ ಪಂಡಿತ್, ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.