
ಹುಬ್ಬಳ್ಳಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸಮಾಜದಿಂದ ಬಂದಿರುವ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲು ಹೊರಟಿರುವುದು ಖಂಡನೀಯ. ಗೋವುಗಳನ್ನು ತಿನ್ನುವುದಿಲ್ಲ, ಮೂರ್ತಿ ಪೂಜೆ ಒಪ್ಪುತ್ತೇನೆ ಎಂದು ಸ್ಪಷ್ಟಪಡಿಸಿ ಉದ್ಘಾಟನೆ ಮಾಡಲಿ ನಾವೂ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಚಾಮುಂಡಿ ಬೆಟ್ಟ ಯಾವಾಗಿದ್ದರೂ ಹಿಂದೂಗಳದ್ದೇ. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ ಅರ್ಥ ಮಾಡಿಕೊಳ್ಳಬೇಕು. ಬಾನು ಮುಷ್ತಾಕ್ ಅವರು ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ನಾಡದೇವತೆ, ನಾಡಹಬ್ಬದ ಚಾಲನೆಗೆ ಕರೆಯುತ್ತಿರುವುದು ಸರಿಯಲ್ಲ. ಹಿಂದೂಗಳ ಹಬ್ಬ. ಆದರೆ, ಬಾನು ಮುಷ್ತಾಕ್ ಅವರು ಪ್ರತಿನಿಧಿಸುವ ಸಮಾಜ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಟ್ಟಿಲ್ಲ. ಗೋವುಗಳನ್ನು ತಿನ್ನುತ್ತಾರೆ. ನಮ್ಮಲ್ಲಿ ಚಾಮುಂಡಿ ದೇವಿಗೆ ಅರಿಷಿಣ, ಕುಂಕುಮ ಹಚ್ಚಿ ಪೂಜೆ ಮಾಡುತ್ತೇವೆ. ಅದಾವುದನ್ನು ಅವರು ಮಾಡಲ್ಲ. ಅವರು ಗೋವುಗಳನ್ನು ತಿನ್ನುವುದಿಲ್ಲ. ಮೂರ್ತಿ ಪೂಜೆಯಲ್ಲಿ ನಂಬಿಕೆ ಇದೆ ಎಂಬುದನ್ನು ಸ್ಪಷ್ಟಪಡಿಸಲಿ. ಆಮೇಲೆ ಉದ್ಘಾಟನೆ ಮಾಡಲಿ. ಆಗ ನಾವು ಒಪ್ಪುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.