
ಉಡುಪಿ: ಜಹೀನ್ ಆಯೇಷಾ ಜಾಕೀರ್ ಎಂಬ ಮಹಿಳೆಯೊಬ್ಬರಿಗೆ ಆನ್ಲೈನ್ ಶಾಪಿಂಗ್ ಹೆಸರಿನಲ್ಲಿ ಕರೆ ಮಾಡಿ ಸಾವಿರಾರು ರೂಪಾಯಿ ಮೋಸ ಮಾಡಿದ ಘಟನೆ ನಡೆದಿದೆ.
ಆಗಸ್ಟ್ 21ರಂದು ಸಂಜೆ 4.30 ರ ವೇಳೆಗೆ ಆಯೇಷಾ ಜಾಕೀರ್ ಮನೆಯಲ್ಲಿರುವಾಗ ಯಾವುದೋ ಅಪರಿಚಿತ ನಂಬರ್ ನಿಂದ ಫೋನ್ ಮಾಡಿ ತಾನು ನೈಕಾ ಎಂಬ ಆನ್ಲೈನ್ ಶಾಪಿಂಗ್ ಕಂಪನಿಯಿಂದ ಮಾತನಾಡುತ್ತಿದ್ದು ನೀವು ಪಿನ್ ಕೋಡ್ ನಂಬರ್ ಅನ್ನು ಸರಿಯಾಗಿ ನಮೂದಿಸಿದೆ ಇರುವುದರಿಂದ ನಿಮ್ಮ ಆರ್ಡರ್ ಸ್ಥಗಿತಗೊಂಡಿದೆ. ಅದನ್ನು ಚಾಲ್ತಿಗೊಳಿಸಬೇಕಾದರೆ ನೀವು ಮೊದಲು ಹಣವನ್ನು ಪಾವತಿಸಬೇಕು. ನಂತರ ಆ ಹಣ ನಿಮಗೆ ಮರುಪಾವತಿ ಆಗುತ್ತದೆ ಎಂದು ಹೇಳಿದ್ದು ಈ ಕರೆಯನ್ನು ನಂಬಿದ ಆಯೇಷಾ ಜಾಕೀರ್ ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗೆ ಒಟ್ಟಾರೆಯಾಗಿ 47,191.50 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಆದರೆ ಯಾವುದೇ ಹಣ ಮರುಪಾವತಿ ಆಗದೇ ಇರುವುದರಿಂದ ಆಯೇಷಾ ಜಾಕೀರ್ ಅವರಿಗೆ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ.