
ಹೊಸದಿಲ್ಲಿ: 2010ರಲ್ಲಿ ವಿವಾಹವಾಗಿದ್ದ ಮಹಿಳೆಗೆ ವರದಕ್ಷಿಣೆ ಕಿರುಕುಳವಿತ್ತು ಎಂಬ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ಮಹಿಳೆಯೊಬ್ಬಳು ಅಳುತ್ತಿದ್ದಳು ಎಂಬ ಕಾರಣಕ್ಕೆ ವರದಕ್ಷಿಣೆ ಕಿರುಕುಳವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
2010ರಲ್ಲಿ ವಿವಾಹವಾಗಿದ್ದ ಮಹಿಳೆಯು 2014ರಲ್ಲಿ ನಿಧನ ಹೊಂದಿದ್ದು ಸಂತ್ರಸ್ತೆಗೆ ಕರೆ ಮಾಡಿದಾಗಲೆಲ್ಲ ಆಕೆ ಅಳುತ್ತಿದ್ದಳು ಎಂದು ಮಹಿಳೆಯ ಸಹೋದರಿ ದೂರು ನೀಡಿದ್ದರು. ಆದರೆ ಮಹಿಳೆಯ ಸಾವಿಗೆ ನ್ಯುಮೋನಿಯಾ ಕಾರಣವೆಂದು ವರದಕ್ಷಿಣೆ ಕಿರುಕುಳ ನೀಡಿರುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲದಿರುವುದನ್ನು ಗಮನಿಸಿದ ಹೈಕೋರ್ಟ್ ಮಹಿಳೆಯ ಪತಿ ಮತ್ತು ಆತನ ಕುಟುಂಬದ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿ ಈ ತೀರ್ಪನ್ನು ನೀಡಿದೆ.