
ತಿರುಪತಿ: ಟಿಟಿಡಿ ಆಡಳಿತ ಮಂಡಳಿಯು ತಿರುಮಲದ ಶ್ರೀ ವೆಂಕಟೇಶ್ವರ ದೇಗುಲದ ಆವರಣದಲ್ಲಿ ರೀಲ್ಸ್ ಗಳನ್ನು ಚಿತ್ರೀಕರಿಸದಂತೆ ಭಕ್ತರಿಗೆ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಟಿಟಿಡಿ ಯು ದೇಗುಲದ ಆವರಣದಲ್ಲಿ ಅನುಚಿತ ಹಾಗೂ ಕಿಡಿಗೇಡಿತನ ತುಂಬಿದ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದು ಇದು ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆ ತರುತ್ತಿದೆ. ಇದಲ್ಲದೆ ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮೇಲೆ ಭದ್ರತಾ ಸಿಬ್ಬಂದಿಗಳು ಕಣ್ಣಿಡಲಿದ್ದು ನಿಯಮ ಮೀರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.