ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಸಮಾರಂಭ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಹಾಗೂ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಜು.31 ರಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಉದ್ಘಾಟನೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ವೀಣಾ ರಾಜೇಶ್ ಭಂಡಾರಿ, ಪುರಸಭಾ ಸದಸ್ಯರಾದ ಶ್ರೀ ಪ್ರದೀಪ್ ರಾಣೆ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಕಾರಂತ್, ಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀ ದಿವಾಕರ ಹಾಗೂ ದೈಹಿಕ ಶಿಕ್ಷಕಿ ಶ್ರೀಮತಿ ವೇದಾವತಿ ದೀಪವನ್ನು ಬೆಳಗಿಸುವುದರೊಂದಿಗೆ ನೆರವೇರಿಸಿ ಕೊಟ್ಟರು. ಪ್ರಾಥಮಿಕ ವಿಭಾಗದ ಬಾಲಕರ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ಹಾಗೂ ದ್ವಿತೀಯ ಸ್ಥಾನವನ್ನು ಎಸ್.ವಿ.ಟಿ. ಸಂಸ್ಥೆ ತಮ್ಮದಾಗಿಸಿಕೊಂಡಿದೆ. ಪ್ರಾಥಮಿಕ ವಿಭಾಗದ ಬಾಲಕಿಯರ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ದ್ವಿತೀಯ ಸ್ಥಾನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ಪಡೆದುಕೊಂಡಿದೆ. ಪ್ರೌಢಶಾಲಾ ವಿಭಾಗದ ಬಾಲಕರ ಹಾಗೂ ಬಾಲಕಿಯರ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಅತಿಥೇಯ ಶಾಲೆಯಾದ ಕಾರ್ಕಳ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಪಡೆದುಕೊಂಡಿದ್ದು, ಬಾಲಕರ ದ್ವಿತೀಯ ಸ್ಥಾನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ಹಾಗೂ ಬಾಲಕಿಯರ ದ್ವಿತೀಯ ಸ್ಥಾನ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಪಡೆದುಕೊಂಡಿರುತ್ತದೆ. ಈ ಪಂದ್ಯಾಟದ ಬಹುಮಾನದ ಪ್ರಯೋಜಕತ್ವವನ್ನು ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಯ ಪೋಷಕರಾದ ಪ್ರಕಾಶ್ ದೂಪದಕಟ್ಟೆ ವಹಿಸಿಕೊಂಡಿದ್ದರು. ಸಮಾರಂಭವನ್ನು ಅಣ್ಣಿ ಮಾಸ್ಟರ್ ನೆರವೇರಿಸಿ ಸಂಸ್ಥೆಯ ದೈಹಿಕ ಶಿಕ್ಷಕಿ ವಂದಿಸಿದರು. ಪಂದ್ಯಾಟವು ಸುಲಲಿತವಾಗಿ ನಡೆಸಿಕೊಡುವಲ್ಲಿ ಭುವನೇದ್ರ ಕಾಲೇಜಿನ ದೈಹಿಕ ಶಿಕ್ಷಕರಾದ ನವೀನ್ ಸರ್ ಹಾಗೂ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಸಂದೇಶ್, ಧವಳ್ ನಾಯಕ್ ಹಾಗೂ ಸುಗಂಧ್ ಸಹಕರಿಸಿರುತ್ತಾರೆ.





