
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ರಾಜ್ಯ ಪ್ರತಿನಿಧಿಯಾಗಿ ಉಡುಪಿ ಆಮಂತ್ರಣ ವೇದಿಕೆ ಪ್ರತಿನಿಧಿಸುತ್ತಿರುವ ಭಾರತಿ ಪರ್ಕಳ ಆಯ್ಕೆಯಾಗಿದ್ದಾರೆ.
ಭಾರತಿ ಇವರು ಎಂ.ಜಿ.ಎಮ್ ಕಾಲೇಜು ಉಡುಪಿಯಲ್ಲಿ ಉಪನ್ಯಾಸಕಿಯಾಗಿ ಬರಹಗಾರರಾಗಿದ್ದೂ ಎಲ್ಲಾ ಸಾಹಿತ್ಯ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವೂ ತೊಡಗಿಸಿಕೊಂಡಿರುತ್ತಾರೆ. ಇವರ ಸೇವೆಗಳನ್ನು ಗಮನಿಸಿ ಮತ್ತು ಸಂಘಟನೆಯ ದೃಷ್ಟಿಯಿಂದ ಈ ಆಯ್ಕೆ ಮಾಡಲಾಗಿದೆ.
ಈಗಾಗಲೇ ರಾಜ್ಯ ಪ್ರತಿನಿಧಿಗಳಾಗಿ HK ನಯನಾಡು ಬಂಟ್ವಾಳ, ಆಶಾ ಅಡೂರು ಬೆಳ್ತಂಗಡಿ, ಉಮಾ ಸುನಿಲ್ ಹಾಸನ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ.