
ಕಾರ್ಕಳ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಪ್ರಾಂಶುಪಾಲರಾದ ಸೋನಲ್ ರವೀಂದ್ರ ಕಾಮತ್ ಇವರು ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಸಿಬಿಎಸ್ಸಿ ದೆಹಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿರುತ್ತಾರೆ.
ಈ ಮೂಲಕ ಇವರು ಸಿಬಿಎಸ್ಸಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡರು. ಶಿಕ್ಷಕರಿಗೆ ತರಬೇತಿ ನೀಡುವುದು ಇವರ ಕನಸಾಗಿತ್ತು ಹಾಗೂ ಪರಮಪೂಜ್ಯ ಶ್ರೀ ಶ್ರೀ ರವಿಶಂಕರ ಗುರುದೇವರ ಉದ್ದೇಶ ಹಾಗೂ ದೃಷ್ಟಿಕೋನವು ಕೂಡ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವುದಾಗಿದೆ. ಇದನ್ನು ಸೋನಾಲ್ ಆರ್ . ಕಾಮತ್ ಇವರು ಪೂರ್ಣಗೊಳಿಸಿದ್ದಾರೆ.ಈ ಆಯ್ಕೆಯ ಪ್ರಕ್ರಿಯೆಯು ಅನೇಕ ಗುಣಾತ್ಮಕ ಸುತ್ತುಗಳನ್ನು ಒಳಗೊಂಡಿದ್ದು ಶ್ರೀಮತಿ ಸೋನಲ್ ಆರ್. ಕಾಮತ್ ಇವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಸಂಪನ್ಮೂಲ ವ್ಯಕ್ತಿಯಾಗಿ ಇವರ ಪಾತ್ರವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಕೋಸ್ಕರ ಕರ್ನಾಟಕದಾದ್ಯಂತ ಶಿಕ್ಷಕರಿಗೆ ತರಬೇತಿ ನೀಡಲು ಅರ್ಹರಾಗಿರುತ್ತಾರೆ. ಈ ತರಬೇತಿ ಕಾರ್ಯಕ್ರಮಗಳು ಶಿಕ್ಷಕರನ್ನು ಮೌಲ್ಯಮಾಪನದ ಸುಧಾರಣೆ, ಸಿಬಿಎಸ್ಸಿ ಪಠ್ಯಕ್ರಮ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕಾದ ಮಾರ್ಗದರ್ಶನ ಹಾಗೂ ಅನುಭವಾತ್ಮಕ ಕಲಿಕೆಗೆ ಉತ್ತೇಜನ , ಶಿಕ್ಷಕರ ಪರಿಣಾಮಕಾರಿ ತರಗತಿ ನಿರ್ವಹಣಾ ಸಾಮರ್ಥ್ಯ ಹಾಗೂ ಪ್ರಸಕ್ತ ಕಾಲಘಟ್ಟದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತರಗತಿಯನ್ನು ನಿರ್ವಹಿಸಲು ಬೇಕಾದ ಎಲ್ಲಾ ಕೌಶಲ್ಯಗಳನ್ನು ಶಿಕ್ಷಕರಿಗೆ ನೀಡುವುದಾಗಿದೆ. ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳುವುದರೊಂದಿಗೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ನಿರ್ವಹಿಸುವ ಕಾರ್ಯಕ್ರಮಗಳು ಅತ್ಯುತ್ತಮವಾಗಿ ಸಫಲಗೊಳ್ಳಲಿ ಎಂದು ಹಾರೈಸಿರುತ್ತಾರೆ. ಶ್ರೀಮತಿ ಸೋನಾಲ್ ಕಾಮತ್ ಇವರು ಅವರ ಈ ಸಾಧನೆಗೆ ಸಹಕರಿಸಿ ಪ್ರೋತ್ಸಾಹಿಸಿದ ಶಾಲಾ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಆಭಾರಿಯಾಗಿದ್ದು ಕೃತಜ್ಞತಾ ಪೂರಕ ವಂದನೆಗಳನ್ನು ಸಲ್ಲಿಸಿರುತ್ತಾರೆ.



















































