
ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರ ತಂದೆ, ಎಂ.ಕೆ ವಾಸುದೇವ (87 ವರ್ಷ) ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು (ಜುಲೈ 17)ನಿಧನರಾಗಿದ್ದಾರೆ.ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು,ಪಾರ್ಥೀವ ಶರೀರ ಅಪರಾಹ್ನ 1 ಗಂಟೆಗೆ ತನ್ನ ಸ್ವಗೃಹ ಕಲಂಬಾಡಿ ಪದವುಗೆ ಆಗಮಿಸಲಿದ್ದು ಸಂಜೆ 4 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.
ಮೃತರು ತಮ್ಮ ಮಗ,ಮಗಳು ಹಾಗೂ ಪತ್ನಿಯನ್ನು ಅಗಲಿದ್ದಾರೆ






















































