ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಇಂದು ರಾಷ್ಟ್ರೀಯ ಪೋಷಣ್ ಅಭಿಯಾನದ ಅಂಗವಾಗಿ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು ಮಕ್ಕಳೊಂದಿಗೆ ಸೇರಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.

ಉಮೇಶ್ ಸರ್ ಅವರು ವಿವಿಧ ತರಕಾರಿ, ಮೊಟ್ಟೆ, ಹಾಲು, ಹಣ್ಣು ಹಂಪಲುಗಳಲ್ಲಿ ಹೇರಳವಾಗಿರುವ ಪೌಷ್ಟಿಕ ಅಂಶಗಳ ಬಗ್ಗೆ ವಿವರಣೆ ನೀಡಿದರು. ಹಣ್ಣು, ತರಕಾರಿ ಧಾನ್ಯ, ಮೊಟ್ಟೆ, ಸೊಪ್ಪುಗಳನ್ನು ಬಳಸಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಕೆಲವು ವಿನ್ಯಾಸಗಳನ್ನು ರಚಿಸಿ ಸಂಭ್ರಮಿಸಿದರು. ಈ ಸಭೆಯಲ್ಲಿ ಪೋಷಕರು ಉಪಸ್ಥಿತರಿದ್ದರು.
