
ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ ಜುಲೈ 3 ರಂದು ನಿಟ್ಟೆ ವಿದ್ಯಾ ಸಂಸ್ಥೆ ಯ ಶಾಂಭವಿ ಸಭಾಂಗಣ ದಲ್ಲಿ ನಡೆಯಿತು. ರೋಟರಿ ಕ್ಲಬ್ ನಿಟ್ಟೆ ಇದರ 2025-26 ಸಾಲಿನ ನೂತನ ಅಧ್ಯಕ್ಷರಾಗಿ ರೊ. ಡಾ. ರಘುನಂದನ್ ಕೆ ರ್ ಹಾಗೂ ಕಾರ್ಯದರ್ಶಿಯಾಗಿ ರೊ. ಶೈಲಜ ವಿ ಶೆಟ್ಟಿ ಅವರಿಗೆ ಪದಪ್ರಧಾನ ಅಧಿಕಾರಿಯಾದ ನಿವೃತ್ತ ಪ್ರಾಂಶುಪಾಲ ರೊ.ಪ್ರೊಫೆಸರ್ ಎಂ ಬಾಲಕೃಷ್ಣ ಶೆಟ್ಟಿ ಅವರು ಪದಪ್ರಧಾನ ನೆರವೇರಿಸಿದರು.
ಈ ಸಮಾರಂಭ ದಲ್ಲಿ 2024-25 ಸಾಲಿನ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ , ವಲಯ ಸೇನಾನಿ ಪ್ರಶಾಂತ್ ಬೆಳಿರಾಯ, 2024-25 ನೇ ಸಾಲಿನ ಸಹಾಯಕ ಗವರ್ನರ್ ಅನಿಲ್ ಡೇಸಾ, 2024-25 ನೇ ಸಾಲಿನ ವಲಯ ಸೇನಾನಿ ಸುರೇಶ್ ನಾಯಕ್, ನಿರ್ಗಮನ ಅಧ್ಯಕ್ಷ ಸತೀಶ್ ಕುಮಾರ್ ಕೆ ಉಪಸ್ಥಿತರಿದ್ದರು.
ರೊ.Phf. ಯೋಗೀಶ್ ಹೆಗ್ಡೆ, ರೊ.ಡಾ.ವೀಣಾದೇವಿ ಶಾಸ್ತ್ರಿಮಟ್, ರೋ. ಡಾ.ಶಶಿಕಾಂತ್ ಕರಿಂಕ, ರೊ
.ಡಾ.ಕೃಷ್ಣ ಪ್ರಸಾದ್, ಅತಿಥಿ ಗಳನ್ನು ಸಭೆಗೆ ಪರಿಚಯಿಸಿದರು.
ನಿಟ್ಟೆ ರೋಟರಿಗೆ ನೂತನ ಸದಸ್ಯರಾಗಿ ಶಶಿಕಲಾ ಬಿ, ಪ್ರೊಫೆಸರ್ ರಾಕೇಶ್ ಶೆಟ್ಟಿ, ಲಿಥಿನ್ ದಾಮೋದರ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ “ನಿರೂಪ” ಬುಲೆಟಿನ್ ಅನ್ನು ಸಂಪಾದಕ ತುಕಾರಾಮ್ ಶೆಟ್ಟಿ ಅವರ ಸಹಕಾರದೊಂದಿಗೆ ಬಿಡುಗಡೆಗೊಳಿಸಲಾಯಿತು.
ರೋಟರಿ ಸೇವಾ ಕಾರ್ಯಕ್ರಮದ ಅಂಗವಾಗಿ ನಿಟ್ಟೆ ಪರಿಸರದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ನಂದಳಿಕೆ ಗ್ರಾಮದ ಬಡ ಕುಟುಂಬಕ್ಕೆ ಪೀಠೋಪಕರಣಕ್ಕಾಗಿ ಧನ ಸಹಾಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ರೊ. Phf. ತುಕಾರಾಂ ಶೆಟ್ಟಿ ಹಾಗು ರೊ. ಶಶಿಕಲಾ ಉ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.