
ನವದೆಹಲಿ: ಜುಲೈ 9ರಂದು ಬ್ಯಾಂಕಿಂಗ್, ವಿಮೆ, ಅಂಚೆ ಸೇರಿ ಕಲ್ಲಿದ್ದಲು, ಗಣಿಗಾರಿಕೆ, ಹೆದ್ದಾರಿ ಮತ್ತು ನಿರ್ಮಾಣ ಕ್ಷೇತ್ರಗಳವರೆಗೆ 25 ಕೋಟಿಗೂ ಹೆಚ್ಚು ಕಾರ್ಮಿಕರು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುವ ನಿರೀಕ್ಷೆ ಇದೆ.
10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಅವುಗಳ ಸಹ ವೇದಿಕೆಯು “ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು ಕೈಗೊಂಡಿರುವುದನ್ನು ವಿರೋಧಿಸಿ ಸಾರ್ವತ್ರಿಕ ಮುಷ್ಕರ ಅಥವಾ ಭಾರತ್ ಬಂದ್ ಗೆ ಕರೆ ನೀಡಿರುವುದಾಗಿ” ಸಂಘಟನೆಗಳು ಹೇಳಿಕೊಂಡಿದ್ದು ಹೀಗಾಗಿ ಇದು ದೇಶಾದ್ಯಂತ ಸೇವೆಗಳಿಗೆ ದೊಡ್ಡ ಪ್ರಮಾಣದಲ್ಲಿ ಅಡ್ಡಿಪಡಿಸುವ ಸಾಧ್ಯತೆ ಇದೆ.
25 ಕೋಟಿಗೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದ್ದು ಔಪಚಾರಿಕ ಮತ್ತು ಅನೌಪಚಾರಿಕ/ಅಸಂಘಟಿತ ಆರ್ಥಿಕತೆಯ ಎಲ್ಲಾ ವಲಯಗಳಲ್ಲಿನ ಒಕ್ಕೂಟಗಳು ಶ್ರದ್ಧೆಯಿಂದ ಸಿದ್ಧತೆಗಳನ್ನು ಕೈಗೊಂಡಿವೆ ಎಂದು ಹೇಳಲಾಗಿದೆ.