ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಅಂತರಾಷ್ಟ್ರೀಯ
ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಕಳ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಾದ ವಿನಾಯಕ ಕುಡ್ವ ಅವರು ಮುಖ್ಯ ಅತಿಥಿಗಳಾಗಿ
ಆಗಮಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
“ದೈನಂದಿನ ಜೀವನದಲ್ಲಿ ಎಲ್ಲರೂ ಯೋಗ ಮಾಡುವ ಅಭ್ಯಾಸವನ್ನು
ರೂಢಿಸಿಕೊಳ್ಳಬೇಕು, ಆರೋಗ್ಯ ಎನ್ನುವುದು ಬದುಕಿರುವವರೆಗೆ ಬಹಳ ಮುಖ್ಯ, ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ” ಎಂದು ಹೇಳಿ ಯೋಗದ ಮಹತ್ವವನ್ನು ಹಾಗೂ ಅದನ್ನು ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೊ ಅವರು ಮಾತನಾಡಿ “ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ನಾವು ಶ್ರದ್ಧಾ ಭಕ್ತಿಯಿಂದ ನಮ್ಮ ದೇಹಕ್ಕೆ ಕೆಲಸವನ್ನು ಕೊಡುತ್ತಾ ಪರಮಾತ್ಮನಲ್ಲಿ ಲೀನವಾಗಬೇಕು.
ಅದುವೆ ನಿಜವಾದ ಯೋಗ” ಎಂದು ಹೇಳಿದರು. ಸಂಸ್ಥೆಯ ಹಿರಿಯ
ವಿದ್ಯಾರ್ಥಿ ರಾಜ್ಯಮಟ್ಟದ ಯೋಗಪಟು ನಿಖಿಲ್ ಪೂಜಾರಿ ಯೋಗ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕಿ ಕುಮಾರಿ ನೃತ್ಯ, ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಕೃಷ್ಣಪ್ರಸಾದ್,ಪ್ರಕಾಶ್ ನಾಯ್ಕ್ ಹಾಗೂ ಕು.ಲಾವಣ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರೌಢಶಾಲಾ ಶಿಕ್ಷಕಿಯಾದ ಶ್ರೀಮತಿ ಅಶ್ವಿನಿ ಪೈ ಅವರು
ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.






