24.8 C
Udupi
Tuesday, February 3, 2026
spot_img
spot_img
HomeBlogಹೆಬ್ರಿ ಗಿಲ್ಲಾಳಿ ಗೋಶಾಲೆಯಲ್ಲಿ, ಭಾಗವತ ಪ್ರವಚನ

ಹೆಬ್ರಿ ಗಿಲ್ಲಾಳಿ ಗೋಶಾಲೆಯಲ್ಲಿ, ಭಾಗವತ ಪ್ರವಚನ

ಹೆಬ್ರಿ :ಶ್ರೀ ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀ ಪಾದರು ಹೆಬ್ರಿ, ಮುದ್ರಾಡಿ ಪರಿಸರದ ಸುಮಾರು 22 ವಿಪ್ರ ಬಂಧುಗಳ ಮನೆಗಳಿಗೆ ಭೇಟಿ ನೀಡಿ ಭಾಗವತ ಪ್ರವಚನ ನೀಡಿ, ಅನಂತರ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ಕೋದಂಡ ರಾಮ ದೇವರ ಪಟ್ಟದ ಪೂಜೆ ಹಾಗೂ ಶ್ರೀ ಕೃಷ್ಣನ ತೊಟ್ಟಿಲು ಪೂಜೆ ನೆರವೇರಿಸಿ , ಭಾಗವತದಲ್ಲಿ ಕೃಷ್ಣನ ಸಂದೇಶಗಳನ್ನು ಪಾಲಿಸಿದರೆ ಲೋಕ ಸುಭಿಕ್ಷವಾಗಲಿದೆ. ಜನರ ಕಷ್ಟ ಪರಿಹಾರವಾಗುತ್ತದೆ. ಎಲ್ಲರ ಜೀವನದಲ್ಲಿ ಮಂಗಳವಾಗುತ್ತದೆ ಎಂದು ಪ್ರವಚನ ನೀಡಿದರು.

ಗೋಶಾಲೆಯ ಟ್ರಸ್ಟಿಗಳಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ. ರವಿ ರಾವ್ ಹೆಬ್ರಿ, ಲಕ್ಷ್ಮಣ ಭಟ್ ಹೆಬ್ರಿ,ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ ಭಟ್ ಅಜೆಕಾರು ಹಾಗೂ ಮುದ್ರಾಡಿ, ಹೆಬ್ರಿ ಪರಿಸರದ ಗೋಭಕ್ತರು ಉಪಸ್ಥಿತರಿದ್ದರು. ಹೆಬ್ರಿ ಸುದರ್ಶನ ಜೋಯಿಸ್, ಉಪ್ಪಳ ಸುದರ್ಶನ ಕಲ್ಕೂರ್, ಬಲ್ಲಾಡಿ ವೇದವ್ಯಾಸ ಭಟ್ ಹಾಗೂ ಹೆಬ್ರಿ ಶಿಶಿರ ಜೋಯಿಸ್ ರವರ ಸಹಕಾರದಿಂದ ಮನೆ, ಮನೆ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page