ಕರಕರಿ ಫ್ರೆಂಡ್ಸ್ ಸೇವಾ ಬಳಗ ಸಂಸ್ಥೆಯ ವತಿಯಿಂದ ಸನ್ಮಾನ

ಕಾರ್ಕಳ:ಭಾರತೀಯ ಸೇನೆಗೆ ಕಾರ್ಕಳದ ಬೈಲೂರಿನ ಯುವಕ, ಕೌಡೂರು ಗ್ರಾಮದ ಸುಧಾಕರ ಆಚಾರ್ಯ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರರಾದ ಸಾಗರ್ ಆಚಾರ್ಯ ಇವರು ಅಗ್ನಿಪಥ್ ಯೋಜನೆಯಲ್ಲಿ ಆಯ್ಕೆಯಾಗಿ ಬೆಂಗಳೂರಿನ ಸೆಂಟರ್‌ನಲ್ಲಿ ತರಬೇತಿ ಪಡೆದು ಇದೀಗ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸಲು ತೆರಳುತ್ತಿರುವ ಇವರನ್ನು ಹಾಗೂ 2024/2025ನೇ ಸಾಲಿನ SSLC ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಣಂಜಾರಿನ ಶ್ರೀಮತಿ ಶಾಂತಿ ಮತ್ತು ಜನಾರ್ದನ್ ಕಾಮತ್ ದಂಪತಿಗಳ ಪುತ್ರಿ ಕು! ಸ್ವಸ್ತಿ ಕಾಮತ್ ರನ್ನು ಕರಕರಿ ಫ್ರೆಂಡ್ಸ್ ಸೇವಾ ಬಳಗ ಸಂಸ್ಥೆಯ ಗೌರವ ಸಲಹೆಗಾರರಾದ ವಕೀಲರಾದ ಸದಾನಂದ್ ಸಾಲ್ಯಾನ್, ದೈಹಿಕ ಶಿಕ್ಷಕರಾದ ಆನಂದ್ ಮಾಸ್ಟರ್ ರವರ ಗೌರವ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸೌಮ್ಯ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಮಾಸ್ಟರ್ ಮತ್ತು ಸನ್ಮಾನಿತರ ಪೋಷಕರು ಹಾಗೂ ಪದಾಧಿಕಾರಿಗಳು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಗೌರವ ಸಲಹೆ ಗಾರರಾದ ಆನಂದ್ ಮಾಸ್ಟರ್ ರವರು ಇಬ್ಬರಿಗೂ ಮುಂದಿನ ಭವಿಷ್ಯ ಉಜ್ವಲ ವಾಗಿರಲೆಂದು ಶುಭ ಹಾರೈಸಿದರು.



















