
ನವದೆಹಲಿ/ಬೆಂಗಳೂರು: ಇರಾನ್-ಇಸ್ರೇಲ್ ಉದ್ವಿಗ್ನತೆ ತಾರಕಕ್ಕೇರಿದ್ದು ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿದ್ದು ಇದರ ಪರಿಣಾಮ ರಾಜ್ಯದ ಮೇಲೂ ಬೀರಿದ್ದು, ಅಡುಗೆ ಎಣ್ಣೆ ಬೆಲೆ ಕಳೆದ ಶನಿವಾರದಿಂದ 3-4ರೂ. ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಸದ್ಯ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿದ್ದು ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ಒಂದೆಡೆ ಕಚ್ಛಾ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಡುಗೆ ಎಣ್ಣೆ ಬೆಲೆ ಶನಿವಾರದಿಂದಲೇ ಲೀಟರ್‌ಗೆ 3 ರಿಂದ 4 ರೂ. ಏರಿಕೆಯಾಗಿದೆ.
ಖಾದ್ಯ ತೈಲಗಳಾದ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ ಹಾಗೂ ದೀಪದ ಎಣ್ಣೆಯಲ್ಲಿಯೂ ಏರಿಕೆಯಾಗಿದ್ದು ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರೆದರೆ ಲೀಟರ್‌ಗೆ 10 ರಿಂದ 30 ರೂ.ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
*ಸನ್ ಫ್ಲವರ್
ಆಯಿಲ್ 139ರೂ. 141ರೂ.
*ಗೋಲ್ಡ್ ವಿನ್ನರ್ 142ರೂ 145ರೂ.
*ರುಚಿಗೋಲ್ಡ್ 110ರೂ. 112ರೂ.
*ಜೆಮಿನಿ 147ರೂ. 150ರೂ.
*ಫ್ರೀಡಂ 137ರೂ. 141ರೂ.
*ದೀಪದ ಎಣ್ಣೆ 111ರೂ. 114ರೂ