
ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದ ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಸಂದೀಪ್ ಅವರು ಅಲ್ಲಿನ ಸರಕಾರದಿಂದ ದಿಗ್ಭಂಧನದಿಂದಾಗಿ ಆರು ವರುಷಗಳ ಕಾಲ ತಾಯ್ನಾಡಿಗೆ ಬರಲು ಸಾಧ್ಯವಾಗದೆ ಸಂದಿಗ್ಧ ಸ್ಥಿತಿಗೆ ಸಿಲಿಕಿದ್ದರು. ತಾಯ್ನಾಡಿಗೆ ಮರಳಲು ಸಾಧ್ಯವಾಗದ ಬಗ್ಗೆ ಅವರ ಕುಟುಂಬ ಚಿಂತೆಗೆ ಒಳಗಾಗಿತ್ತು.
ಮಗನ ಕುರಿತು ಕಂಗೆಟ್ಟಿದ್ದ ಸಂದೀಪ್ ಅವರ ತಾಯಿ ಸುನಂದಾ ಎಂಬವರು ಕಳೆದ ಆರು ತಿಂಗಳ ಹಿಂದೆ ಶಾಸಕರಾದ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಿದ್ದರು. ಮಗ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭೀತಿ ವ್ಯಕ್ತಪಡಿಸಿ ಮಗನನ್ನು ಮನೆಗೆ ಕರೆತರಲು ಸಹಕಾರ ನೀಡುವಂತೆ ಕೇಳಿದ್ದರು.
ಕಳೆದ ಆರು ವರ್ಷಗಳಿಂದ ಮಗ ಸಂದೀಪ್ ಅನ್ನು ನೋಡದೆ ಬಳಲಿದ್ದ ಅವರನ್ನು ಶಾಸಕರು ಸಂತೈಸಿ ಕಳುಹಿಸಿದ್ದರು.
ಆ ಬಳಿಕ ಶಾಸಕರು ದುಬೈನಲ್ಲಿ ನೆಲೆಸಿರುವ ತಮ್ಮ ಸ್ನೇಹಿತ ಪ್ರತಾಪ್ ಶೆಟ್ಟಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಅಲ್ಲಿನ ಸರಕಾರಕ್ಕೆ ದಂಡ ವಿಧಿಸಿದ ವಿಚಾರ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ್ದರು. ಅಲ್ಲಿನ ಸರಕಾರಕ್ಕೆ ಕಟ್ಟಬೇಕಿದ್ದ ಹಣ ಕಡಿತಗೊಳಿಸಿ, ಬಾಕುಳಿದ ಮೊತ್ತ ಪಾವತಿಗೆ ಶಾಸಕರು ಮುಂದಾಗಿ ಅದು ಪೂರ್ಣಗೊಂಡ ಬಳಿಕ ಎಲ್ಲ ಪ್ರಕ್ರೀಯೆ ಪೂರ್ಣಗೊಳಿಸಿದ್ದರು.ನಿರ್ಬಂಧ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಂಡು ಸಂದೀಪ್ ತಾಯ್ನಾಡಿಗೆ ವಾಪಸಾಗಿದ್ದಾರೆ.
ಮಂಗಳೂರು ಶಕ್ತಿನಗರದ ವ್ಯಕ್ತಿಯಿಂದ ನಾನು ಮೋಸ ಹೋಗಿದ್ದೇನೆ. ಆತನಿಂದ ನಾನು ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡೆ. ನಂಬಿಕೆಯಿಂದ ವೀಸಾ ಐಡಿ ಕೊಟ್ಟು ತೊಂದರೆ ಎದುರಿಸಬೇಕಾಯಿತು. ಅಲ್ಲಿನ ಸರಕಾರ ನನಗೆ ದಂಡ ವಿಧಿಸಲು ಹೇಳಿತ್ತು. ಅಷ್ಟು ಆರ್ಥಿಕ ಶಕ್ತಿ ನನಗಿರಲಿಲ್ಲ. ಆಗ ನಾನು ನೆರವಿಗಾಗಿ ಹಲವರನ್ನು ಕೇಳಿಕೊಂಡೆ.ಆದರೆ ಯಾರು ಸಹಾಯ ಮಾಡದೇ ಇದ್ದಾಗ ನಾನು ತುಂಬಾ ಕಂಗಲಾಗಿದ್ದೆ. ಆಗ ಶಾಸಕ ಸುನಿಲ್ ಕುಮಾರ್ ಅವರ ಮೊರೆ ಹೋದೆವು. ಶಾಸಕರು ನನ್ನನ್ನು ಸೇಪಾಗಿ ಮರಳಿ ಮನೆಗೆ ಕರೆ ತರಲು ಸಹಕರಿಸಿದರು. ಶಾಸಕರು ಸ್ದಂದನೆ, ದುಬೈಯಲ್ಲಿರುವ ಪ್ರತಾಪ್ ಶೆಟ್ಟಿ ಅವರ ಸಹಕಾರದಿಂದ ಮರಳಿ ಊರಿಗೆ ಬರಲು ಸಾಧ್ಯವಾಯಿತು. ಅದರ ಫಲವಾಗಿ ನಾನಿಂದು ಮನೆಗೆ ಬಂದು ತಾಯಿ ಜೊತೆ ವಾಸವಿದ್ದೇನೆ. ನನಗೆ ಸಹಕರಿಸಿದ ಶಾಸಕರಿಗೆ, ನೆರವಾದ ಪ್ರತಾಪ್ ಶೆಟ್ಟಿ ಹೀಗೆ ನಾನು ಊರಿಗೆ ಸುರಕ್ಷಿತವಾಗಿ ಬರಲು ಸಹಕರಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ
ವೀಸಾ ( ಐಡಿ) ಕೊಟ್ಟು ತಾನು ಮೋಸ ಹೋಗಿದ್ದು, ಯಾರು ಕೂಡ ಎಷ್ಟೇ ವಿಶ್ವಾಸವಿದ್ದರೂ ವೀಸಾ ಕೊಡಬೇಡಿ ಎಂದವರು ಹೇಳಿಕೊಂಡಿದ್ದಾರೆ



















