
ಬಜ್ಪೆಯಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಘಟನೆ ನಡೆದ ದಿನದಿಂದಲೂ ನಾವು ಈ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದೆವು. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ತನಿಖಾ ವಿಧಾನವೂ ಏಕಪಕ್ಷೀಯವಾಗಿತ್ತು.
ಹಿಂದು ಕಾರ್ಯಕರ್ತರನ್ನು ವಿನಾ ಕಾರಣ ಗುರಿಯಾಗಿಸಿ ಎಫ್ ಐಆರ್ ದಾಖಲಿಸುವುದು, ದ್ವೇಷದ ಗಡಿಪಾರು ಶಿಕ್ಷೆ ಇತ್ಯಾದಿ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು. ಮಂಗಳೂರಿಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು ಏಕಪಕ್ಷೀಯವಾಗಿ ಹಿಂದು ಸಂಘಟನೆಯ ಮೇಲೆ ಆರೋಪ ಹೊರಿಸಿದ್ದರು. ಸಿಎಂ ನವರಂತೂ ಸುಹಾಸ್ ಶೆಟ್ಟಿಯ ಮೇಲೆ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದರು.ಇದರಿಂದ ರಾಜ್ಯ ಸರ್ಕಾರದ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದೆಲ್ಲದಕ್ಕೂ ಎನ್ ಐಎ ತನಿಖೆಯಿಂದ ಉತ್ತರ ಲಭಿಸಲಿದೆ. ಸುಹಾಸ್ ಶೆಟ್ಟಿ ಹಂತಕರಿಗೆ ಶಿಕ್ಷೆಯಾಗಲಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.





