ಇವಿಎಂ ಮೂಲಕ ಶಾಲಾ ಸಂಸತ್ ಚುನಾವಣೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ: 06-06-2025ರಂದು ಶಾಲಾ ಸಂಸತ್ ಚುನಾವಣೆ ಇವಿಎಂ ಮತಯಂತ್ರದ ಮೂಲಕ ನಡೆಯಿತು. ಶಾಲಾ ಮುಖ್ಯಮಂತ್ರಿ ಸ್ಥಾನಕ್ಕೆ 10ನೇ ತರಗತಿಯ ನಾಲ್ಕು ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ಕವೀಶ್ ಎ. ಅಮೀನ್. ಹೃಷಿಕ, ವಿಶ್ವಾಸ್ ಮತ್ತು ಯಶ ಜಿ. ಕೋಟ್ಯಾನ್ ಅಭ್ಯರ್ಥಿಗಳಾಗಿದ್ದ ಈ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಮಾಸ್ಟರ್ ಕವೀಶ್ ಎ. ಅಮೀನ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಯಶ ಜಿ. ಕೋಟ್ಯಾನ್ ಆಯ್ಕೆಗೊಂಡರು.
ಈ ವರ್ಷದ ಶಾಲಾ ಸಂಸತ್ ಚುನಾವಣೆಯ ವಿಶೇಷವೇನೆಂದರೆ ಚುನಾವಣೆಯಲ್ಲಿ ಬಳಸಿದ ಮತಯಂತ್ರವನ್ನು ನಮ್ಮ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿಯಾದ ಮಾಸ್ಟರ್ ಋಷಿಕೇಶ್ ಎಟಿಎಲ್ ಸಹಕಾರದೊಂದಿಗೆ ತಯಾರಿಸಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಯಿತು.. ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕ ವೃಂದದ ಸಹಕಾರದಿಂದ ಚುನಾವಣಾ ಪ್ರಕ್ರಿಯೆಗಳು ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದವು.





