
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಪ್ರತಿ ಗುರುವಾರ ನಡೆಸಲಾಗುವ ಗುರು ಪೂಜೆಯನ್ನು ಈ ವಾರವೂ ಶಾಲಾ ಕೋಶಾಧಿಕಾರಿಗಳೂ, ಆಡಳಿತ ಸಲಹೆಗಾರರೂ ಆದ ಶ್ರೀಯುತ ದಿನೇಶ್ ಕಾಮತ್ ಇವರು ನಡೆಸಿಕೊಟ್ಟರು.
ನಂತರ ಪ್ರತೀ ವರ್ಷ ಜೂನ್ 5 ರಂದು ನಡೆಸಲಾಗುವ ವಿಶ್ವ ಪರಿಸರ ದಿನವನ್ನು ಈ ಬಾರಿಯೂ ಶಾಲೆಯಲ್ಲಿ ಅರ್ಥವತ್ತಾಗಿ ಆಚರಿಸಲಾಯಿತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಅಮೂಲ್ಯ ಔಷಧೀಯ ಸಸ್ಯಗಳನ್ನು ನೆಡಲಾಯಿತು.ನಂತರ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ಮಕ್ಕಳು ತಮ್ಮ ತಮ್ಮ ಮನೆಗಳಿಂದ ತಂದ ಪ್ಲಾಸ್ಟಿಕ್ ವಸ್ತುಗಳನ್ನು ಕಸದ ಡಬ್ಬದಲ್ಲಿ ಹಾಕುವಂತೆ ಮಾರ್ಗದರ್ಶನವನ್ನು ನೀಡಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡವಂತೆ ತಿಳಿ ಹೇಳಲಾಯಿತು.ಅದರಂತೆ ಮಕ್ಕಳು ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರುವಂತೆ ತಿಳಿ ಹೇಳಲಾಯಿತು.ಈ ಮೂಲಕ ಶಾಲಾ ಪ್ರಾಂಶುಪಾಲರು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ವಾರವೂ ಪ್ಲಾಸ್ಟಿಕ್ ಸಂಗ್ರಹ ಮಾಡಿ ಅದನ್ನು ಕ್ರಮಬದ್ಧವಾಗಿ ತ್ಯಾಜ್ಯ ವಿಸರ್ಜನೆಗೆ ಯೋಜನೆಯನ್ನು ರೂಪಿಸಲಾಯಿತು.ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕಿಯರು ಭಾಗವಹಿಸಿದರು.





