
ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ ಕಾಳಿಕಾಂಬಾ ಕರಿಯಕಲ್ಲು ಕಾರ್ಕಳ ಇಲ್ಲಿ ಪರಿಸರ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ಶಾಲಾ ಆಡಳಿತ ಮಂಡಳಿ,ಶಾಲಾ ಮಕ್ಕಳು, ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿಗಳು ಸೇರಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಶಾಲಾ ಸಂಚಾಲಕರಾದ ಅಬ್ದುಲ್ ಖಾಲಿಕ್, ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಾಕ್ಷಿ ಹೆಗ್ಡೆ, ಸ್ವಚ್ಛ ಬ್ರಿಗೇಡ್ ನ ಸದಸ್ಯರಾದ ಸುರೇಶ್ ಕುಲಾಲ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇತನ್ ಉಪಸ್ಥಿತಿ ಇದ್ದರು.





