
ಕಾರ್ಕಳ: ಜೂ 4 ಕಾರ್ಕಳ ಬಿಎಸ್ ಎನ್ ಎಲ್ ವ್ಯಾಪ್ತಿಯ ಸೂಡ ದೂರವಾಣಿ ಕೇಂದ್ರದಲ್ಲಿ ಟೆಲಿಕಾಂ ಮೆಕ್ಯಾನಿಕ್ ಆಗಿ ಬಳಕೆದಾರರ ಮೆಚ್ಚುಗೆ ಗಳಿಸಿದ್ದ ಶ್ರೀ ಶಿವರಾಮ ಸಫಲಿಗ ಅವರ ವಯೋನಿವೃತ್ತಿಯ ಸಂದರ್ಭದಲ್ಲಿ ಅವರನ್ನು ಕಾರ್ಕಳ ದೂರವಾಣಿ ಮನೋರಂಜನಾ ಕೂಟದ ವತಿಯಿಂದ ಬೀಳ್ಕೊಡಲಾಯಿತು. ದೂರವಾಣಿ ಮನೋರಂಜನಾ ಕೂಟದ ಅಧ್ಯಕ್ಷರಾದ ಜೆ. ಟಿ ಓ ಶ್ರೀ ಸುದರ್ಶನ್ ಅವರು ಅಧ್ಯಕ್ಷತೆ ವಹಿಸಿದ್ದರು. ಎಜಿಎಂ ಗಳಾದ ಹರಿಕುಮಾರ್, ಶ್ರೀ ಗಫೂರ್ ಮುಖ್ಯ ಅತಿಥಿಗಳಾಗಿದ್ದರು.
ಸಹೋದ್ಯೋಗಿಗಳಲ್ಲಿ ನಿವೃತ್ತರಾದ ಕೆ.ಕೆ. ನಂಬಿಯಾರ್, ಜಯರಾಮ ಎನ್. ಉಷಾ ಶಶಿಧರ್, ಹಾಲಿ ಜೆ. ಟಿ. ಓ. ವಿನೀತ್ ಮಾತನಾಡಿ ನಿವೃತ್ತರ ಸೇವಾ ತತ್ವರತೆ, ಸಮಾಜಮುಖಿ ಕಾರ್ಯಗಳನ್ನು ಕೊಂಡಾಡಿದರು. ಬಿಎಸ್ಸೆನ್ನೆಲ್ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷಾ ಮಾತನಾಡಿ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಫಲಿಗ ಅವರನ್ನು ಸಂಘಟನೆಯ ಪರವಾಗಿ ಶಾಲು ಸ್ಮರಣಿಕೆಗಳೊಂದಿಗೆ ಸನ್ಮಾನಿಸಿದರು. ಕೂಟದ ಪರವಾಗಿ ಸಫಲಿಗ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಉತ್ತರದಲ್ಲಿ ಬಿ ಎನ್ನನ್ನಲ್ ಸಂಸ್ಥೆಯಲ್ಲಿ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟ ನಷ್ಟಗಳನ್ನು ಉಲ್ಲೇಖಿಸಿ ಸರ್ವರಿಗೂ ವಂದನೆ ಸಲ್ಲಿಸಿದರು. ಹಲವು ಮಂದಿ ಹಾಲಿ ಹಾಗೂ ನಿವೃತ್ತ ಸದಸ್ಯರು ಉಪಸ್ಥಿತರಿದ್ದರು. ಗುರುರಾಜ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುಧೀರ್ ಶೆಟ್ಟಿ ಸಹಕರಿಸಿದರು. ಕೆ.ಕೆ. ನಂಬಿಯಾರ್ ವಂದಿಸಿದರು.





