27.7 C
Udupi
Friday, April 3, 2026
spot_img
spot_img
HomeBlogಕಾಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿಯ 2024-25 ವಾರ್ಷಿಕ ಮಹಾಸಭೆ, ಸಹಮಿಲನ

ಕಾಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿಯ 2024-25 ವಾರ್ಷಿಕ ಮಹಾಸಭೆ, ಸಹಮಿಲನ

spot_imgspot_img

ದಿ|ಲೀನಾ ಡಿ| ಸಿಲ್ವಾ ಸ್ಮಾರಕ ಅತ್ಯುತ್ತಮ ಘಟಕ ಪ್ರಶಸ್ತಿ ವಿತರಣೆ


. ದಿನಾಂಕ 18.05.2025 ರಂದು ಆದಿತ್ಯವಾರ ಕಾರ್ಕಳ ಕ್ರೈಸ್ಟ್ ಕಿಂಗ್ ಸಭಾ ಭವನದಲ್ಲಿ ಕಥೊಲಿಕ್ ಸಭಾ ವಲಯದ ಆಧ್ಯಾತ್ಮಿಕ ನಿದೆ೯ಶಕರಾದ ಅತೀ ವಂ|ಫಾ| ಆಲ್ಬನ್ ಡಿ’ಸೋಜ ಅತ್ತೂರು ದೀಪ ಬೆಳಗಿಸಿ ಉದ್ಘಾಟನಾ ಸಂದೇಶ ಕಥೊಲಿಕ್ ಸಭೆಯು ಕ್ರೈಸ್ತ ಪವಿತ್ರ ಸಭೆಯ ಸಾಮಾಜಿಕ ಮುಖವಾಡವಾಗಿದೆ ಹಾಗೂ ಸಾಮಜಿಕ ದರ್ಪಣ ಸಾಗಬೇಕು ಯೆಂದು ಸಲಹೆ ನಿಡಿದರು. ವಲಯ ಅಧ್ಯಕ್ಷರಾದ ವಿಲ್ಸನ್ ಮಸ್ಕರೇನ್ಹಾಸ್ ಕೇರಾ ಇವರು ಸಭಾ ಅಧ್ಯಕ್ಷತೆ ವಹಿಸಿ ಎಲ್ಲಾ ಘಟಕಗಳು ಕಥೊಲಿಕ್ ಸಭೆಯ ಸರ್ವಾನು ಅಭಿವ್ರದ್ದಿಗೆ ಶ್ರಮಿಸಲು ಕರೆ ಕೊಟ್ಟರು.


ಈ ಸಂಧರ್ಭದಲ್ಲಿ ಹಲವಾರು ವಷ೯ಗಳಿಂದ ಕಥೊಲಿಕ್ ಸಭಾ ವಲಯಕ್ಕೆ ಕೊಡುಗೈ ದಾನಿಯಾದ ಯಶಸ್ವಿ ಉದ್ಯಮಿ ಜೊನ್ ಡಿ’ಸಿಲ್ವಾ ಕುಂಟಲ್ಪಾಡಿ ಹಾಗೂ ಯಶಸ್ವಿ ಉದ್ಯಮಿ ಜೆರೋಮ್ ಡಿ’ಮೆಲ್ಲೊ ಮಿಯಾರು ಇವರುಗಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹಾಗೂ ಶೆಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ Chartered Accountant ಕುಮಾರಿ ಲಾವ್ಯಾ ಮೆಂಡೊನ್ಸಾ, ಕಾರ್ಕಳ ಇವರಿಗೆ ಸನ್ಮಾನಿಸಲಾಯಿತು.
ವಲಯದ 9 ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
2024-25ನೇ ಸಾಲಿನ ಅತ್ಯುತ್ತಮ ಘಟಕ ಪ್ರಥಮ ಸ್ಥಾನ ಕ್ರೈಸ್ಟ್ ಕಿಂಗ್ ಕಾಕ೯ಳ ನಗರ ಘಟಕಕ್ಕೆ ಲಭಿಸಿತು, ದಿ| ಲೀನಾ ಡಿಸಿಲ್ವಾ ಕುಂಟಲ್ಪಾಡಿ ಸ್ಮಾರಕ ಪರ್ಯಾಯ ಫಲಕ ಮತ್ತು ನಗದು ಬಹುಮಾನ ಪ್ರಾಯೋಜಕರಾದ ಜೋನ್ ಡಿಸಿಲ್ವಾರವರು ವಿತರಿಸಿದರು. ಅತ್ಯುತ್ತಮ ಘಟಕ ದ್ವಿತೀಯ ಸ್ಥಾನ ಮಿಯ್ಯಾರು ಘಟಕಕ್ಕೆ ದಿ| ಜೇಕೊಬ್ ಟೆಲ್ಲಿಸ್ ಅಜೆಕಾರು ಸ್ಮಾರಕ ಪ್ರಶಸ್ತಿ ಮತ್ತು ನಗದು ಬಹುಮಾನದ ಪ್ರಾಯೋಜಕರಾದ ನಿಕಟ ಪೂರ್ವ ಅಧ್ಯಕ್ಷರು ಜೋನ್ ಟೆಲ್ಲಿಸ್ ರವರ ಪರವಾಗಿ ಅಧ್ಯಕ್ಷ ವಿಲ್ಸನ್ ಮಸ್ಕರೇನಸ್ ನೀಡಿದರು.

ಅತ್ಯುತ್ತಮ ಘಟಕ ತೃತೀಯ ಸ್ಥಾನ ನಕ್ರೆ ಘಟಕಕ್ಕೆ ದಿ| ದುಲ್ಸಿನ್ ವಾಜ್ ಅತ್ತೂರು ಸ್ಮಾರಕ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಪ್ರಾಯೋಜಕರಾದ ಡೆನಿಸ್ ವಾಜ್ ಅತ್ತೂರು ರವರು ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಡಿಅಲ್ಮೇಡಾ, ನಿಕಟ ಪೂರ್ವ ಅಧ್ಯಕ್ಷರು ಸಂತೋಷ್ ಕರ್ನೇಲಿಯೊ, ಉದ್ಯಮಿ ಜೋನ್ ಡಿ’ಸಿಲ್ವಾ, ಕೇಂದ್ರೀಯ ಸಹ ಕಾಯ೯ದಶಿ೯ ಶ್ರೀಮತಿ ಸೋನು ಸಿಕ್ವೇರಾ ಮಿಯಾರು, ವಲಯ ನಿಯೋಜಿತ ಅಧ್ಯಕ್ಷೆ ಶ್ರೀಮತಿ ಒಲಿವಿಯಾ ಡಿ’ಮೆಲ್ಲೊ ಕಾರ್ಕಳ, ಕೇಂದ್ರೀಯ ಉಪಾಧ್ಯಕ್ಷರು ಹಾಗೂ ವಲಯ ಖಜಾಂಜಿ ಸೊಲೊಮನ್ ಆಲ್ವಾರಿಸ್ ಕಾರ್ಕಳ, ಕಾರ್ಯಕ್ರಮದ ಸಂಚಾಲಕರು ಆಂಟನಿ ಮಿರಾಂಡಾ ಕಣಜಾರು, ಸಹ ಸಂಚಾಲಕರಾದ ಶ್ರೀಮತಿ ಲವೀನಾ ಡಿಸೋಜ ನಕ್ರೆರವರು ಉಪಸ್ಥಿತರಿದ್ದರು. ಮಾಜಿ ವಲಯಾಧ್ಯಕ್ಷರಾದ ಮೆಕ್ಸಿಂ ಡಿಮೆಲ್ಲೊರವರು ಕಾರ್ಯಕ್ರಮ ನಿರೂಪಿಸಿದರು. ವಲಯ ಕಾರ್ಯದರ್ಶಿ ಅಂತೋನಿ ಮಿರಾಂದ ಧನ್ಯವಾದ ಸಮರ್ಪಿಸಿದರು
ವಿವಿಧ ಘಟಕಗಳಿಂದ ಮನೊರಂಜನೆ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಹ ಭೋಜನದೊಂದಿಗೆ ಸಹಮಿಲನ ಕಾರ್ಯಕ್ರಮ ಅಂತ್ಯಗೊಂಡಿತು.

ಕಾರ್ಯಕ್ರಮದ ಯಸಸ್ಸಿಗೆ ಸ್ಥಳಿಯ ಘಟಕದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಸಹಕರಿಸಿದರು. ಸುಮಾರು 70 ವಲಯ ಸದಸ್ಯರು ಹಾಜಾರಗಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page