
ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರ್ಕಾರದಿಂದ ಭೇಟಿ ನೀಡಿ ಯಾರೂ ಸಾಂತ್ವನ ಹೇಳದ ವಿಚಾರವಾಗಿ ಪ್ರತಿಕ್ರಿಯಿಸಿ ಸುಹಾಸ್ ಶೆಟ್ಟಿ ಮೇಲೂ ಕೊಲೆ ಸೇರಿದಂತೆ ಐದು ಕೇಸ್‌ಗಳಿವೆ. ಹೀಗಾಗಿ, ನಾವು ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೂ ಕೇಸ್‌ಗಳಿವೆ, ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ, ನಾವು ಭೇಟಿ ಕೊಟ್ಟಿಲ್ಲ. ಆದರೆ, ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲು ಹೇಳಿ ಬಿಜೆಪಿ ಒತ್ತಾಯದ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್ ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡ್ತಾ ಇದೆ. ಎಂಟು ಜನರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ, ಈ ಪ್ರಕರಣ ಎನ್‌ಐಎಗೆ ಕೊಟ್ಟಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ. ಬಿಜೆಪಿ ಆರೋಪ ಸರಿಯಲ್ಲ ಎಂದು ಹೇಳಿದರು.













