
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಕಾಶ್ಮೀರದ ಪೆಹಲ್ಗಾಮ್ ಬಳಿ ಹಿಂದುಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನ ಖಂಡಿಸಿದ್ದು, ಮೃತಪಟ್ಟಿರುವ 26 ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಉಗ್ರರ ದಾಳಿಗೆ ತಮ್ಮ ಮನೆಯವರನ್ನು ಕಳೆದುಕೊಂಡ ನೋವಿನಲ್ಲಿ 26 ಕುಟುಂಬಸ್ಥರು ಇದ್ದಾರೆ. ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು. ಹಾಗಾಗಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಣವನ್ನು ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇವೆ. ದುಃಖದಲ್ಲಿರುವ ಕುಟುಂಬದಲ್ಲಿ ಸಂತೋಷ, ಶ್ರೇಯಸ್ಸು ವೃದ್ಧಿಸಲಿ ಎಂದು ಹೇಳಿದ್ದಾರೆ.
ಈಗಾಗಲೇ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ನಾಗರೀಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ಮಠದ ವತಿಯಿಂದಲೂ 26 ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು. ಮಠದ ಆಡಳಿತಾಧಿಕಾರಿ ಅದನ್ನ ನೋಡಿಕೊಂಡು ಆ ಕುಟುಂಬಗಳಿಗೆ ತಲುಪಿಸುತ್ತಾರೆ ಎಂದು ಮಾಹಿತಿ ನೀಡಿದರು.





