19.7 C
Udupi
Tuesday, December 23, 2025
spot_img
spot_img
HomeBlogಜ್ಞಾನಸುಧಾ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಜ್ಞಾನಸುಧಾ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಆಡಳಿತಕ್ಕೊಳಪಟ್ಟ ಕಾರ್ಕಳ ಜ್ಞಾನಸುಧಾ ಆಂಗ್ಲ
ಮಾಧ್ಯಮ ಪ್ರೌಢಶಾಲೆಯು, ಡಾ. ಸುಧಾಕರ ಶೆಟ್ಟಿಯವರ ಆಶಯದಂತೆ 2013-14 ಶೈಕ್ಷಣಿಕ ವರ್ಷದಿಂದ ಕಾರ್ಕಳದ ಆಸುಪಾಸಿನ ವಿಧ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ
ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ, ನಗರ ಭಾಗದ ಮಕ್ಕಳಿಗೆ ಸಿಗುವ ಆಧುನಿಕ ಸೌಲಭ್ಯಗಳನ್ನು ನೀಡುತ್ತಾ ರಾಜ್ಯ ಪಠ್ಯಕ್ರಮದ ಜೊತೆಗೆ ವಿಧ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಹಾಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ ತರಬೇತಿ ನೀಡುತ್ತಾ ಬಂದಿರುತ್ತದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯಿಂದ ವಿದ್ಯಾರ್ಜನೆ ಪಡೆದ ಅದೆಷ್ಟೋ ವಿದ್ಯಾರ್ಥಿಗಳು KCET / NEET / JEE Main ನಂತಹ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುತ್ತಾರೆ. ಇದೀಗ ಪ್ರತೀ ವರ್ಷದಂತೆ ಈ ಬಾರೀಯೂ ಮುಂದಿನ ಶೈಕ್ಷಣಿಕ ವರ್ಷ- 2025-26ನೇ ಸಾಲಿಗೆ, ಕಾರ್ಕಳ ತಾಲೂಕಿನ ಅರ್ಹ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರತೀ ತರಗತಿಗೆ ಐದು ವಿದ್ಯಾರ್ಥಿಗಳಂತೆ 6, 7, 8 ಹಾಗೂ 9ನೇ ತರಗತಿಗೆ ಉಚಿತ ಶಿಕ್ಷಣಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಟ್ರಸ್ಟ್ನ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಉಚಿತ ಶಿಕ್ಷಣವೂ ಒಂದಾಗಿದೆ. ಖಾಸಗಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಪಡೆಯಲು ವಂಚಿತರಾದ ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾರ್ಕಳ ತಾಲೂಕಿನ 3 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಮೂವರು ಶಿಕ್ಷಕಿಯರನ್ನು ಸಂಸ್ಥೆಯ ವತಿಯಿಂದ 8 ವರ್ಷದಿಂದ ನೀಡುತ್ತಾ ಬಂದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ಉಚಿತ ಶಿಕ್ಷಣಕ್ಕೆ ಅರ್ಜಿಯನ್ನು ಪೋಷಕರು ಖುದ್ದಾಗಿ ಬಂದು ಸಂಸ್ಥೆಯ ಕಛೇರಿಯಲ್ಲಿ ದಿನಾಂಕ: 10-05-2025ರ ಒಳಗೆ ಸಲ್ಲಿಸುವಂತೆ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page