21.1 C
Udupi
Tuesday, February 17, 2026
spot_img
spot_img
HomeBlogಜನಿವಾರ ಕತ್ತರಿಸಿದ ಪ್ರಕರಣ ನಡೆದಿರುವುದು ತುಂಬಾ ಖೇದಕರ -ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ...

ಜನಿವಾರ ಕತ್ತರಿಸಿದ ಪ್ರಕರಣ ನಡೆದಿರುವುದು ತುಂಬಾ ಖೇದಕರ -ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್

spot_imgspot_img
   ರಾಜ್ಯದ ನಾನಾ ಕಡೆಗಳಲ್ಲಿ ಎಲ್ಲಾ ಸಮಾಜದ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಗಾಗಿ ತೆರಳಿದ ವಿದ್ಯಾರ್ಥಿಗಳಲ್ಲಿ, ಜನಿವಾರದಾರಿ ವಿದ್ಯಾರ್ಥಿಗೆ ಜನಿವಾರ ಕತ್ತರಿಸಿದ ಪ್ರಕರಣ ನಡೆದಿರುವುದು ತುಂಬಾ ಖೇದಕರವಾಗಿದೆ. 

ತಂದೆ - ತಾಯಿಯವರು ತಮ್ಮ ಮಕ್ಕಳಿಗೆ ತಮ್ಮ ಸಂಪ್ರದಾಯದಂತೆ ಬ್ರಹ್ಮೋಪದೇಶ ಮಾಡುವುದು ಪೋಷಕರ ಕರ್ತವ್ಯ.ಉಪನಯನ, ಜನಿವಾರ ಧಾರಣೆ ತಲಾ ತಲಾಂತರದಿಂದ ಬಂದ ಸಂಪ್ರದಾಯ, ವರ್ಷಗಳಲ್ಲಿ  ಉಪಕರ್ಮ ದಿನ  ಜನಿವಾರ ತೊಡುವ ಸಂಪ್ರದಾಯ ಈಗಲೂ ಇದೆ. ಇದರಲ್ಲಿ ಯಾವುದೇ ಸರಕಾರದ ಅಧಿಕಾರಿಗಳಿಗೆ ಜನಿವಾರವನ್ನು ಧರಿಸಬಾರದು ಅಥವಾ ಕತ್ತರಿಸಿ ಬಿಸಾಡುವ ಹಕ್ಕು ಯಾರಿಗೂ ಇಲ್ಲ. ಜನಿವಾರ ತೆಗಿಸಿದ ಅಥವಾ ಕತ್ತರಿಸಿದ ಅಧಿಕಾರಿಗಳಿಗೆ ಯಾರು ಆದೇಶ ಮಾಡಿದರು ಎಂದು ಕೂಲಂಕುಶ ತನಿಖೆ ಆಗಬೇಕು, ಮುಂದೆ ಇಂತಹ ಘಟನೆಗಳು ನಡೆದರೆ ಆ ಕರ್ತವ್ಯದಲ್ಲಿ ಇರುವ ಅಧಿಕಾರಿಯನ್ನು ಈ ಸಮಾಜದ ಮುಂದೆ ನೀಡಿದರೆ ನಾವು ತಕ್ಕ ಪಾಠ ಕಲಿಸಲು ಸಿದ್ದರಿದ್ದೇವೆ, ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಕವಡೆಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page