
ಕಲಬುರಗಿ: ಸಚಿವ ಪ್ರಿಯಾಂಕ ಖರ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಕುಗ್ಗುತ್ತಿದ್ದಂತೆಯೇ ಐಟಿ, ಇ.ಡಿ ಎಂಬೆಲ್ಲಾ ದಾಳಿ ಶುರು ಆಗ್ತಾವೆ. ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ಎಂದು ಖಾರವಾಗಿ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಿಂದ ಐಟಿ, ಇ.ಡಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು ಇಷ್ಟು ವರ್ಷ ಅವ್ರು ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗ್ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ. ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನಿಫಿಟ್ ಸಂಸ್ಥೆಗಳು ಒಂದೂ ರುಪಾಯಿ ಕೂಡ ಅವರು ಡಿವಿಡೆಂಟ್, ಸ್ಯಾಲರಿ ತೊಗೊಳ್ಳುವ ಹಾಗಿಲ್ಲ. ಆದ್ರು ಕೂಡ ಇವರು ಐಟಿ, ಇ.ಡಿ ಅವರು ವೈಯುಕ್ತಿಕ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತೊಗೊತ್ತಿದ್ದಾರೆ ಎಂದು ಹೇಳಿದರು…
75 ಜನ ಆರ್ ಎಸ್ ಎಸ್ ಗೆ ದುಡ್ಡು ಕೊಟ್ಟಿದ್ದಾರಂತೆ, ಅವರ ಮೇಲೆ ಐಟಿ, ಇ.ಡಿ ದಾಳಿ ಆಗಬೇಕು. ನಮ್ಮ ಪಕ್ಷ, ನಮ್ಮ ನಾಯಕರಿಗೆ ಬದ್ಧತೆ ಇದೆ. ರಾಜಕೀಯ ದ್ವೇಷ ಸಾಧಿಸಲು ಕೇಂದ್ರ ಸರ್ಕಾರ ಇಡಿ ಐಟಿ ದುರ್ಬಳಕೆ ಮಾಡಿಕೊಳ್ತಿದೆ ಎಂದು ಖರ್ಗೆ ತಿವಿದರು.