
ಮುಡಾರು ಗ್ರಾಮ ಪಂಚಾಯತ್, ಶ್ರದ್ಧಾ ಸಂಜೀವಿನಿ ಸ್ವ ಸಹಾಯ ಸಂಘಗಳ ಒಕ್ಕೂಟ, ಸಮುದಾಯ ವೈದ್ಯಕೀಯ ವಿಭಾಗ ಕೆ. ಎಂ. ಸಿ. ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ .ಗ್ರಾಮ ಪಂಚಾಯತ್ ನ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆಯಿತು.

ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ನೆರವೇರಿಸಿದರು.ಸಭೆಯಲ್ಲಿ ಗ್ರಾಮಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲತಿ ರಮೇಶ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ವಿನಯ.ಡಿ.ಬಂಗೇರ, ಪ್ರಶಾಂತ್ ಕುಮಾರ್,ಸಂತೋಷ್ ಪೂಜಾರಿ, ರಜತ್ ರಾಮ್ ಮೋಹನ್,ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ, ವೈದ್ಯಾಧಿಕಾರಿ ಶ್ರೇಯ, ಕಾರ್ಯದರ್ಶಿ ಜಯಕರ ಎಸ್, ಗ್ರಾಮಾಭಿವೃದ್ದಿ ಅಧಿಕಾರಿ ರಮೇಶ್ ಎಸ್ ಉಪಸ್ಥಿತರಿದ್ದರು.



