
ಜೈನಧರ್ಮಿಯರ ಪವಿತ್ರಮಂತ್ರ ‘ಣಮೋಕಾರ ಮಹಾಮಂತ್ರ’.
ದಿ.9.4.2025 ರಂದು ವಿಶ್ವಶಾಂತಿಗಾಗಿ ‘ವಿಶ್ವ ಣಮೋಕಾರ ಮಹಾಮಂತ್ರ
ದಿನ’ ಎಂದು ಘೋಷಿಸಲಾಗಿತ್ತು. ಆ ದಿನ ಬೆಳಿಗ್ಗೆ ಜೈನಧರ್ಮಿಯರು
ಮಾತ್ರವಲ್ಲದೆ ಇತರ ಧರ್ಮಿಯರೂ ‘ಪಂಚನಮಸ್ಕಾರ
ಮಹಾಮAತ್ರ’ವನ್ನು ಸಾಮೂಹಿಕವಾಗಿ ಪಠಿಸಿದರು. ಈ ದಿನದ
ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯವರು. Specail Picture Post Card ’ ಅನ್ನು ದೇಶದ ವಿವಿಧ ವಲಯಗಳಲ್ಲಿ ಬಿಡುಗಡೆ ಮಾಡಿದರು.
ನವದೆಹಲಿಯಲ್ಲಿ ನಡೆದ ಸಮಾರಂಭವೊoದರಲ್ಲಿ ಮಾನ್ಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ
ಅತಿಥಿಗಳಾಗಿ ಭಾಗವಹಿಸಿ ಈ ವಿಶೇಷ ಅಂಚೆ ಕಾರ್ಡ್ ನ್ನು ಬಿಡುಗಡೆ
ಮಾಡಿದರು. ಮಂಗಳೂರಿನ ಪ್ರಧಾನ ಅಂಚೆ ಕಛೇರಿಯಲ್ಲಿ ನಡೆದ
ಸಮಾರಂಭಕ್ಕೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ
ಯುವರಾಜ್ ಜೈನ್ ಹಾಗೂ ಶ್ರೀಮತಿ ರಶ್ಮಿತಾ ಜೈನ್ ಅವರನ್ನು
ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿ ಗೌರವಿಸಲಾಗಿತ್ತು. ಅವರ
ಅನುಪಸ್ಥಿತಿಯಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ
ಅಕ್ಷಯ್ ಜೈನ್ ಹಾಗೂ ಸ್ವರೂಪ್ ಜೈನ್ ಅವರು
ಭಾಗವಹಿಸಿದ್ದರು. ಅಂದು ಬಿಡುಗಡೆಗೊಂಡ ಆ ವಿಶೇಷ
ಅಲ್ಪಮ್‌ನ್ನು ಅವರೀರ್ವರೂ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿ.
10.04.2025 ರಂದು ನಡೆದ ‘ಭಗವಾನ್ ಶ್ರೀ ಮಹಾವೀರ ಸ್ವಾಮಿಯ
ಜನ್ಮಕಲ್ಯಾಣ ಮಹೋತ್ಸವ’ದ ಕರ‍್ಯಕ್ರಮದಲ್ಲಿ ಸಂಸ್ಥೆಯ
ಗೌರವಾಧ್ಯಕ್ಷರೂ ಮಾಜಿ ಶಾಸಕರೂ ಆದ ಕೆ.ಅಭಯಚಂದ್ರ
ಜೈನ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್
ಹಾಗೂ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ಹಸ್ತಾಂತಿರಿಸಿದರು.