
ದಿನಾಂಕ 17.4.2025ನೇ ಗುರುವಾರದಂದು ರಾತ್ರಿ ಪಿಲಾರು ಬಗ್ಗರಾಜು ಮನೆಯಲ್ಲಿ ದೈವಗಳಿಗೆ ಹರಕೆಯ ನೇಮೋತ್ಸವ ನಡೆಯಲಿದೆ.
ಅವರ ಮನೆಯಲ್ಲಿ ಈವರೆಗೆ ಆರಾಧಿಸಿಕೊಂಡು ಬಂದಿರುವ ಮೈಸಂದಾಯ, ವರ್ತೆ-ಪಂಜುರ್ಲಿ, ಮಂತ್ರದೇವತೆ, ಗುಳಿಗೆ-ಚೌಂಡಿ ದೈವಗಳ ಹರಕೆಯ ನೇಮೋತ್ಸವ ನಡೆಯಲಿದ್ದು ಹೀಗಾಗಿ ಎಲ್ಲರೂ ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಾನುಗ್ರಹ ಪಡೆಯಬೇಕಾಗಿ ಶ್ರೀಮತಿ ಮತ್ತು ಶ್ರೀ ಮುದ್ದು ಪೂಜಾರಿ ಹಾಗೂ ಕುಟುಂಬಸ್ಥರು ಆಹ್ವಾನಿಸಿದ್ದಾರೆ.



