ಬಂಟರ ಸೇವಾ ಸಂಘ ರಿ. ಕುಕ್ಕುಂದೂರು ವತಿಯಿಂದ ಅಭಿನಂದನೆ

ಕುಮಾರಿ ಸುದೀಕ್ಷ ಶೆಟ್ಟಿ ಕಾರ್ಕಳದ ಕ್ರೈಸ್ಟ್ ಕಿಂಗ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 595 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ರಾಂಕ್ ರಾಜ್ಯಕ್ಕೆ 5ನೇ ರಾಂಕ್ ಗಳಿಸಿ ನಮ್ಮೂರಿನ ಹೆಸರನ್ನು ಬಾನೆತ್ತರಕ್ಕೆ ಏರಿಸಿದ ಹೆಮ್ಮೆಯ ಕುವರಿಯಾಗಿದ್ದಾಳೆ.
ಸುದೀಕ್ಷಾ ಶೆಟ್ಟಿ ನಮ್ಮ ಸಂಘದ ಸಕ್ರಿಯ ಸದಸ್ಯೆ ಕುಕ್ಕುಂದೂರು ಕೊರಚೊಟ್ಟು ನಿವಾಸಿ ಶ್ರೀಮತಿ ಸುದರ್ಶಿನಿ ಸುರೇಶ್ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿದ್ದು ಇವರ ಈ ಸಾಧನೆಯನ್ನು ತಿಳಿದು ಕುಕ್ಕುಂದೂರು ಬಂಟರ ಸೇವಾ ಸಂಘ (ರಿ.)ಇದರ ಅಧ್ಯಕ್ಷರಾದ ಶ್ರೀಮತಿ ಜಯಂತಿ ಸುಧಾಕರ್ ಶೆಟ್ಟಿ, ಗೌರವಾಧ್ಯಕ್ಷರಾದ ಭರತ್ ಎನ್. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಕೆ ರವಿ ಶೆಟ್ಟಿ, ಕೋಶಾಧಿಕಾರಿಯಾದ ರಘುನಾಥ್ ಶೆಟ್ಟಿ, ನಿಕಟ ಪೂರ್ವ ಕಾರ್ಯದರ್ಶಿಯಾದ ಅಶೋಕ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅನಿತಾ ಶೆಟ್ಟಿ, ರಘುರಾಮ್ ಶೆಟ್ಟಿ, ರಾಜೇಶ್ ಶೆಟ್ಟಿ ಬಸ್ರಿ, ಸಾಗರ್ ಶೆಟ್ಟಿ, ಹರೀಶ್ ಶೆಟ್ಟಿ ಇವರ ಸಮ್ಮುಖದಲ್ಲಿ ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು ಇವರ ಪರವಾಗಿ ಸನ್ಮಾನಿಸಿ ಭವಿಷ್ಯದ ಉಜ್ವಲತೆಗಾಗಿ ಆಶೀರ್ವಾದ ಪೂರ್ವಕವಾಗಿ ನಿಕಟ ಪೂರ್ವ ಅಧ್ಯಕ್ಷರಾದ ರವಿ ಕೆ ಶೆಟ್ಟಿ ಅವರು ಶುಭ ಹಾರೈಕೆಯ ಮಾತುಗಳನ್ನು ಆಡಿದರು.





















