
ದಿನಾಂಕ 11-04-2025ನೇ ಶುಕ್ರವಾರದಂದು ಕಾರ್ಕಳದ ಉಚ್ಚಂಗಿ ದೇವಸ್ಥಾನದಲ್ಲಿ 2ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಉಚ್ಚಂಗಿ ನಗರ ಮಾರ್ಕೆಟ್ ರಸ್ತೆ ಕಾರ್ಕಳ ಇಲ್ಲಿ ನಡೆಯಲಿರುವುದು.
ವೇದಮೂರ್ತಿ ಶ್ರೀ ಸುಧೀರ್ ಭಟ್ ಕಾಬೆಟ್ಟು ಇವರ ಪೌರೋಹಿತ್ಯದಲ್ಲಿ ಬೆಳಗ್ಗೆ 9:30ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆದು 1:00 ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7:00 ಯಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳೆಲ್ಲರೂ ತನು,ಮನ ಧನಗಳಿಂದ ಸಹಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ರಣವೀರ ಸಮಾಜ ಬಾಂಧವರು ಆಹ್ವಾನಿಸಿದ್ದಾರೆ.