ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ

2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶವನ್ನು ಗಳಿಸಿ ಸಮಾಜದ ಹೆಮ್ಮೆಗೆ ಪಾತ್ರವಾಗಿರುತ್ತದೆ. ಈ ಬಾರಿ ಒಟ್ಟು 144 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 144 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
70 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಹಾಗೂ 72 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿದ್ಯಾರ್ಥಿನಿ ತ್ರಿಷಾ ಆರ್. ಶೆಟ್ಟಿ 584 ( ಲೆಕ್ಕಶಾಸ್ತ್ರ 95, ವ್ಯವಹಾರ ಅಧ್ಯಯನ 100 ಮತ್ತು ಅರ್ಥಶಾಸ್ತ್ರ 97 ಕನ್ನಡ 98 ಇಂಗ್ಲೀಷ್ 95 ಮತ್ತು ಗಣಕ ವಿಜ್ಞಾನ 99) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿನಿ ಧನ್ಯ 582 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ವಿದ್ಯಾರ್ಥಿನಿ ಶಾಶ್ವತಿ 580 ಹಾಗೂ ಸಾನಿಧ್ಯ 580 ಅಂಕಗಳೊಂದಿಗೆ ಕ್ರಮವಾಗಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.