21.6 C
Udupi
Monday, February 16, 2026
spot_img
spot_img
HomeBlogತಾನು ಇಷ್ಟಪಟ್ಟು ಕಟ್ಟಿ ಬೆಳೆಸಿದ್ದ "ಗಲ್ಲಿ ಕಿಚನ್" ಗೆ ವಿದಾಯ ಹೇಳಿದ ಬಿಗ್ ಬಾಸ್ ಖ್ಯಾತಿಯ...

ತಾನು ಇಷ್ಟಪಟ್ಟು ಕಟ್ಟಿ ಬೆಳೆಸಿದ್ದ “ಗಲ್ಲಿ ಕಿಚನ್” ಗೆ ವಿದಾಯ ಹೇಳಿದ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ

spot_imgspot_img

ಬೆಂಗಳೂರು: ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಬದುಕಿನಲ್ಲಿ ಹೊಸ ಪ್ರಯಾಣ ಶುರು ಮಾಡಿದ್ದು ಈ ಹಿನ್ನೆಲೆ ತಾನು ಇಷ್ಟಪಟ್ಟು ಕಟ್ಟಿ ಬೆಳೆಸಿದ್ದ ಬದುಕು ಬದಲಿಸಿದ್ದ “ಗಲ್ಲಿ ಕಿಚನ್” ಗೆ ವಿದಾಯ ಹೇಳಿದ್ದಾರೆ.

ಕಿರುತೆರೆ ಹಾಗೂ ಸಿನಿಮಾ ರಂಗದಿಂದ ಆಫರ್ ಗಳು ಬರಲು ಕಡಿಮೆಯಾದ ಹಿನ್ನೆಲೆಯಲ್ಲಿ ಶೈನ್ ಶೆಟ್ಟಿ “ಗಲ್ಲಿ ಕಿಚನ್” ಎನ್ನುವ ಸಣ್ಣ ದೋಸೆ ಕ್ಯಾಂಪ್ ಶುರು ಮಾಡಿದ್ದರು. ಇವರ ಈ ಶ್ರಮಕ್ಕೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಗಲ್ಲಿ ಕಿಚ್ಚನ್ ಎರಡು ಬ್ರಾಂಚ್ ಗಳ ಹೋಟೆಲ್ ಮಟ್ಟಕ್ಕೆ ಬೆಳೆದಿದ್ದರಿಂದ ಶೈನ್ ಶೆಟ್ಟಿ ಹೋಟೆಲ್ ಉದ್ಯಮಿಯಾಗಿ ಯಶಸ್ವಿ ಕಂಡರು.

ಇದೀಗ ಗಲ್ಲಿ ಕಿಚನ್ ಗೆ ವಿದಾಯದ ಬಹಿರಂಗ ಪತ್ರ ಬರೆದಿರುವ ಶೈನ್ ಶೆಟ್ಟಿ ” ಗಲ್ಲಿ ಕಿಚನ್ ಎಂಬ ಕನಸನ್ನು ಬೆಳೆಸಿದ ಎಲ್ಲರಿಗೂ ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ. ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್ ಗಳ ಹೋಟೆಲ್ ಮಟ್ಟಕ್ಕೆ ಬೆಳೆಸಿದ್ದೀರಿ. ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ.

ಬೆಳೆಯುತ್ತಾ ಬೆಳೆಸುತ್ತಾ ಮುಂದಕ್ಕೆ ಸಾಗು ದೇ ಜೀವನ ಅಲ್ವಾ. ಹೀಗಾಗಿ ಮುಂದೊಂದಿಷ್ಟು ಕೆಲಸ ಮಾಡುವುದಿದ್ದು ಹೀಗಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ ಆರು ವರ್ಷಗಳ “ಗಲ್ಲಿ ಕಿಚನ್” ಪ್ರಯಾಣಕ್ಕೆ ವಿದಾಯ ಹೇಳುವ ಸಮಯ. ವಿದಾಯ ಹೇಳುವುದು ಇಲ್ಲಿ ಬರೆದಷ್ಟು ಸುಲಭ ಅಲ್ಲ ನಿಮಗೂ ಗೊತ್ತು. ಆದರೆ ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗುವುದು ಅನಿವಾರ್ಯ.

ನನ್ನಂತೆ ಆಸಕ್ತಿ ಇರುವ ಯುವ ಪ್ರತಿಭೆಗೆ “ಗಲ್ಲಿ ಕಿಚನ್” ಅನ್ನು ಹಸ್ತಾಂತರ ಮಾಡಿದ್ದು ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರೆಯಲಿದೆ. ಶ್ರದ್ಧೆಯಿಂದ ಜನರ ಪ್ರೀತಿನ ಉಳಿಸ್ಕೊಂಡು ಬೆಳೆಸ್ಕೊಂಡು ಹೋಗಲಿ ಅಂತ ಆಶಿಸ್ತೀನಿ. ತಿಂದು ಉಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲಾ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೇ ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ. ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page