20.8 C
Udupi
Sunday, February 15, 2026
spot_img
spot_img
HomeBlogವಾಣಿಜ್ಯ ಬಳಕೆಯ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 41 ರೂ. ಇಳಿಕೆ

ವಾಣಿಜ್ಯ ಬಳಕೆಯ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 41 ರೂ. ಇಳಿಕೆ

spot_imgspot_img

ನವದೆಹಲಿ: ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಅದೇನೆಂದರೆ ವಾಣಿಜ್ಯ ಬಳಕೆಯ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 41 ರೂ. ಇಳಿಕೆಯಾಗಿದೆ.

ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ. ಇಳಿಸಿದ್ದು ಹೊಸ ಬೆಲೆ ಏ.2 ಅಂದರೆ ನಾಳೆಯಿಂದ ಜಾರಿಯಾಗಲಿದೆ. ಹೊಸ ಬೆಲೆಯಿಂದಾಗಿ ರೆಸ್ಟೋರೆಂಟ್, ಹೋಟೆಲ್ ಮತ್ತು ವಾಣಿಜ್ಯ ಘಟಕಗಳಿಗೆ ಪ್ರಯೋಜನವಾಗಲಿದ್ದು, ಆದರೆ ದಿನಬಳಕೆಯ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿರುವುದು ಬೇಸರ ತಂದಿದೆ.

ದರ ಇಳಿಕೆಯ ಬಳಿಕ, ದೆಹಲಿಯಲ್ಲಿ 1,803 ರೂ. ಇದ್ದ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು 1,762 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ 1,836 ರೂ., ಮುಂಬೈನಲ್ಲಿ 1,714 ರೂ., ಕೋಲ್ಕತ್ತಾದಲ್ಲಿ 1,872 ರೂ., ಚೆನ್ನೈನಲ್ಲಿ 1,924 ರೂ.ಗೆ ಇಳಿಕೆಯಾಗಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page