
ಹೆಬ್ರಿ: ರೆನಾಲ್ಟ್ ಟ್ರೈಬರ್ ಕಾರೊಂದು ಆಗುಂಬೆ ಘಾಟ್ನ ಏಳನೇ ತಿರುವಿನಲ್ಲಿ ಪಲ್ಟಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಪವಾಡಸದೃಶವಾಗಿ ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಉಡುಪಿಯಿಂದ ಶಿವಮೊಗ್ಗಕ್ಕೆ ಕಾರು ಪ್ರಯಾಣಿಸುತ್ತಿದ್ದಾಗ ಟಿಪ್ಪರ್ ಒಂದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದು ಇದನ್ನು ಗಮನಿಸಿದ ಕಾರಿನ ಚಾಲಕ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನ ಮಾಡುವಾಗ ನಿಯಂತ್ರಣ ತಪ್ಪಿ ತೀಕ್ಷ್ಣವಾದ ತಿರುವಿನಲ್ಲಿ ಕಾರು ಪಲ್ಟಿಯಾಯಿತು. ಪರಿಣಾಮ ಕಾರಿನ ಮೇಲ್ಚಾವಣಿಗೆ ತೀವ್ರ ಹಾನಿಯಾದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.




