
ಸ್ಕೋಡಾ ಕಾರು ಶಿವಮೊಗ್ಗ ಕಡೆಯಿಂದ ಕಾರ್ಕಳ ಕಡೆಗೆ ತೆರಳುತ್ತಿದ್ದು ಹಾಗೂ ಮಾರುತಿ ಒಮಿನಿ ಆಗುಂಬೆ ಕಡೆಗೆ ಹೋಗುತ್ತಿದ್ದು ಇಳಿಜಾರಿನ ಅಪಾಯಕಾರಿ ತಿರುವಿನಲ್ಲಿ ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ಮಕ್ಕಳಿಗೆ ತೀವ್ರ ಗಾಯಗಳಾಗಿದ್ದು ಓಮ್ನಿಯ ಮುಂಭಾಗ ನಜ್ಜುಗುಜ್ಜಾದ ಪರಿಣಾಮ ಚಾಲಕನನ್ನು ಗಾಡಿಯಿಂದ ಹೊರತೆಗೆಯಲು ಸ್ಥಳೀಯರು ಹರ ಸಾಹಸ ಪಟ್ಟರು. ಅಜೆಕಾರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




