
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ 21/3/2025 ಸಾಣೂರು ಪಂಚಾಯತ್ ಹಾಗೂ ಜೆಸಿಐ ಕಾರ್ಕಳ, ಲೇಡಿ ಜೇಸಿ ವಿಂಗ್ ವತಿಯಿಂದ ಸಾಣೂರು ಗ್ರಾಮದ ಮಹಿಳೆಯರಿಗೆ “ಸುವರ್ಣ ಗ್ರಾಮೋಧಯ ಸೌಧ” ಇಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ, ಡಿಜಿಟಲ್ ಸಾಕ್ಷಾರತಾ ಮಾಹಿತಿ, ಕಾನೂನು ಅರಿವು ಕಾರ್ಯಾಗಾರ, ಮತ್ತು ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು. ಉಚಿತ ಸ್ತನ ಕ್ಯಾನ್ಸರ್ ಶಿಬಿರದಲ್ಲಿ ಸುಮಾರು 51 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಯುವರಾಜ್ ಜೈನ್, ಉಪಾಧ್ಯಕ್ಷರು, ಸದಸ್ಯರು , ಹಾಗೂ ಗ್ರಾಮ ಪಂಚಾಯತ್ PDO ಮಧು MC, ಕರುಣಾಕರ್ ಕೋಟ್ಯಾನ್ , ಗ್ರಂಥ ಪಾಲಕಿ ಜ್ಯೋತಿ , ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು, ಹಾಗೂ ಮೆಡಿಕಲ್ ಕೊ ಆರ್ಡಿನೇಟರ್ ಪುಷ್ಪಲತ, Dr. ದಿಯ, ಹಾಗೂ ಆರೋಗ್ಯ ಅಧಿಕಾರಿಗಳು ಮಣಿಪಾಲ, ಹಾಗು ಸಂಜೀವಿನಿ ಸಂಘ ಸಂಸ್ಥೆ ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ಸದಸ್ಯರು, ಶಿಬಿರಾರ್ಥಿಗಳು, ಸಾಣೂರು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೇಸಿಐ ಕಾರ್ಕಳದ ಅಧ್ಯಕ್ಷರು ಜೇಸಿ ಶ್ವೇತಾ ಎಸ್ ಜೈನ್, ಕಾರ್ಯದರ್ಶಿ JFM ಸುಷ್ಮಿತಾ ರಾವ್, ಕೋಶಾಧಿಕಾರಿ ಜೇಸಿ ರೇವತಿ ಶೆಟ್ಟಿ, ಲೇಡಿ ಜೇಸಿ ನಿರ್ದೇಶಕರು JFM ಶಾಹೀನ್ ರಿಜ್ವಾನ್ ಖಾನ್, ಪೂರ್ವಾಧ್ಯಕ್ಷರಾದ ಜೇಸಿ ದಿವ್ಯಾಸ್ಮಿತಾ ಭಟ್, ಜೇಸಿ ಶಗುಪ್ತ ಖಾನ್, ಜೆಜೇಸಿ ಸೋನಿ ಉಪಸ್ಥಿತರಿದ್ದರು.




















