
ಕಾರ್ಕಳ: ಎ.23 ರಿಂದ ಮೇ 4 ರವರೆಗೆ ರ ವರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೆಂದಬೆಟ್ಟು ಸಾಣೂರು ಇಲ್ಲಿ ನಡೆಯುವ ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕ್ಷೇತ್ರದ ಪ್ರಧಾನ ಅರ್ಚಕರು ಆದ ವೇದಮೂರ್ತಿ ಶ್ರೀ ಶ್ರೀರಾಮ್ ಭಟ್ 12 ದಿನ ನಡೆಯುವ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂಪೂರ್ಣ ವಿವರಣೆ ನೀಡಿ ಸರ್ವ ರೀತಿಯಲ್ಲಿ ಸಹಕಾರ ಕೋರಿದರು. ಈ ಸಂಧರ್ಭದಲ್ಲಿ ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಭಾತ್ ನಾಯ್ಕ್ ಸಾಣೂರು ಗುತ್ತು, ಸ್ವಾಗತ ಸಮಿತಿ ಸಂಚಾಲಕರು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಯುವರಾಜ್ ಜೈನ್, ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಪಮ್ಮನಾಡಿ ಗುತ್ತು, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಪೂಜಾರಿ ಸೇಣರಬೆಟ್ಟು ಮತ್ತು ಸಾಣೂರು ನರಸಿಂಹ ಕಾಮತ್, ವಿವಿಧ ಸಮಿತಿ ಸಂಚಾಲಕರಾದ ವಿಶ್ವನಾಥ್ ಶೆಟ್ಟಿ ಭಾಮಿನಿ ಏರ್ನಡ್ಕಗುತ್ತು, ಕೊರಗ ಶೆಟ್ಟಿ ಕಾಂದೋಟ್ಟು, ಪ್ರಸಾದ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಸುಧಾಕರ್ ಇಂದಿರಾನಗರ, ರವಿ ಪೂಜಾರಿ, ಪುರುಷೋತ್ತಮ್ ಗೌಡ, ಜಗದೀಶ್ ಕುಮಾರ್, ಸಾಧು ನಾಯ್ಕ್, ಸುಭಾಸ್ ಪೂಜಾರಿ ಮಹೇಶ್ ಶೆಟ್ಟಿ, ರಾಜೇಶ್ ಇಂದಿರಾನಗರ, ಮಹೇಶ್ ಶೆಟ್ಟಿ ಸದಾಶಿವ ಶೆಟ್ಟಿ ವಿವಿಧ ಸಮಿತಿಯ ಸಹ ಸಂಚಾಲಕರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕರುಣಾಕರ್ ಎಸ್ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾದ ಮೋಹನ್ ಶೆಟ್ಟಿ ನಿರೂಪಿಸಿ ಧನ್ಯವಾದಗೈದರು.



















































