
ನವದೆಹಲಿ: ಪೇಟೆಂಟ್ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು ಇದೀಗ ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತವಾಗಿದೆ.
ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವ ದರದಲ್ಲಿ ದೊರಕುವಂತೆ ಮಾಡಿದೆ.
ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ ಮ್ಯಾನ್‌ಕೈಂಡ್ ಫಾರ್ಮಾ, 10 ಮಿಗ್ರಾಂ ಟ್ಯಾಬ್ಲೆಟ್‌ಗೆ 5.49 ರೂ. ಮತ್ತು 25 ಮಿಗ್ರಾಂ ಟ್ಯಾಬ್ಲೆಟ್‌ಗೆ 9.9 ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಈ ಹಿಂದೆ ಎಂಪಾಗ್ಲಿಫ್ಲೋಜಿನ್‌ನ ಬೆಲೆ 10 ಮಿಗ್ರಾಂ ಡೋಸೇಜ್ ರೂಪದ ಟ್ಯಾಬ್ಲೆಟ್‌ಗೆ 58.7 ರೂ. ಮತ್ತು 25 ಮಿಗ್ರಾಂಗೆ 71.1 ರೂ. ಇತ್ತು.