ಅನಂತ ಕೃಷ್ಣ ಗೋಶಾಲೆ ಮುನ್ನಡೆಸುತ್ತಿರುವ ಭಾರತಿ ಪುರಾಣಿಕ್ ಇವರಿಗೆ ಗೌರವ

ಜೇಸಿಐ ಕಾರ್ಕಳ ಹಾಗು ಲೇಡಿ ಜೆಸಿ ವಿಂಗ್ ವತಿಯಿಂದ ಅನಂತಕೃಷ್ಣ ಗೋ ಶಾಲೆಯನ್ನು ಮುನ್ನಡೆಸುತ್ತಿರುವ ಭಾರತಿ ಪುರಾಣಿಕ್ ಇವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕ ಸನ್ಮಾನವನ್ನು ನೀಡಿ ಗೌರವಿಸಲಾಯಿತು. ಜೀವನ ಪೂರ್ತಿ ಗೋಮಾತೆಯ ಹಾಲನ್ನು ಕುಡಿದು ಬದುಕುತ್ತಿರುವ ನಮಗ ನೀ ಯಾರುಗಾದೆಯೋ ಎಲೆ ಮಾನವ ಎನ್ನುವ ಸಾಲು ನೆನಪಾಗುತ್ತದೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸಲು ಯಾವುದೇ ಕೂಡಾ ಸಂಸ್ಥೆ ಹೆಮ್ಮೆ ಪಡುತ್ತದೆ ಸುಮಾರು 200 ಗೋವನ್ನು ನಿಸ್ವಾರ್ಥತೆಯಿಂದ ಸಾಕುತ್ತಿರುವ ತಾಯಿಗೆ ಜೇಸಿ ಯ ಸದಸ್ಯರು ಗೌರವಿಸಿದರು
ಈ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳದ ಅದ್ಯಕ್ಷರು ಜೆಸಿ ಶ್ವೇತಾ ಎಸ್ ಜೈನ್ ಕಾರ್ಯದರ್ಶಿ ಜೆಎಫ್‌ಎಂ ಸುಶ್ಮಿತಾ ರಾವ್ ಲೇಡಿ ಜೇಸಿ ನಿರ್ದೇಶಕಿ ಜೆಎಫ್‌ಎಂ ಶಹೀನ್ ರಿಜ್ವಾನ್ ಖಾನ್, ವಲಯ ನಿರ್ದೇಶಕ ಜಿ&ಡಿ ಜೆಎಫ್‌ಡಿ ವಿಘ್ನೇಶ್ ಪ್ರಸಾದ್ ಹೇಗೂ ಉಪಾಧ್ಯಕ್ಷ ಜೆಎಫ್‌ಡಿ ರಿಜ್ವಾನ್ ಖಾನ್ ಉಪಸ್ತಿತರಿದ್ದರು.