25.9 C
Udupi
Saturday, July 12, 2025
spot_img
spot_img
HomeBlogಕಾರ್ಕಳ: ಯುವ ಬ್ರಾಹ್ಮಣ ಪರಿಷತ್‌ ವಾರ್ಷಿಕೋತ್ಸವ ಸಮಾರಂಭ

ಕಾರ್ಕಳ: ಯುವ ಬ್ರಾಹ್ಮಣ ಪರಿಷತ್‌ ವಾರ್ಷಿಕೋತ್ಸವ ಸಮಾರಂಭ

ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್, ಕಾರ್ಕಳ ಇದರ ಎಂಟನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಕಳೆದ ಭಾನುವಾರ ಸಾಯಂಕಾಲ 4 ಗಂಟೆಯಿಂದ ಕಾರ್ಕಳ ಶ್ರೀ ರಾಘವೇಂದ್ರ ಮಠದ ಶ್ರೀ ಗೋವಿಂದ ಧಾರ್ಮಿಕ ಸಭಾಭವನದಲ್ಲಿ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಾಹಿತಿಗಳಾದ ಶ್ರೀ ಬಿ. ಜನಾರ್ಧನ ಭಟ್, ಬೆಳ್ಮಣ್ ಇವರು ಕೂಟವನ್ನು ಉದ್ಘಾಟಿಸಿ,ನೆರೆದವರನ್ನು ಉದ್ದೇಶಿಸಿ ಮಾತನಾಡಿ ಬ್ರಾಹ್ಮಣರ ಏಳಿಗೆಗೆ ಯುವಕರ ಕೊಡುಗೆ ಹಾಗೂ ಒಗ್ಗಟ್ಟಿನ ಮಂತ್ರದಿಂದ ಯಾವುದೇ ಕ್ಲಿಷ್ಟಕರ ಕಾರ್ಯಗಳನ್ನೂ ಸಹ ಅತೀ ಸುಲಭದಿಂದ ಪೂರ್ಣಗೊಳಿಸಬಹುದು ಎಂದು ಕರೆ ನೀಡಿದರು. ಮುಖ್ಯ ಅಭ್ಯಾಗತರಾಗಿ ಉಪಸ್ಥಿತಿ ಇದ್ದ ಪರಿಷತ್ತಿನ ಸಂಚಾಲಕರಾಗಿರುವ ಶ್ರೀ ಶ್ರೀ ರಾಮ್ ಭಟ್, ಪ್ರಧಾನ ಅರ್ಚಕರು ಹಾಗೂ ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾಣೂರು ಇವರು ಪರಿಷತ್ ನ ಮೂಲ- ದ್ಯೆಯೋದ್ದೇಶಗಳ ಕುರಿತು ಪ್ರಸ್ಥಾವಿಸಿ ಶುಭಕೋರಿದರು. ಪರಿಷತ್ತಿನ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಯೋಜನೆಗಳ ಕುರಿತು ಪ್ರಸ್ತಾವಿಸಿ ಎಲ್ಲರ ಸಹಕಾರವನ್ನು ಬಯಸಿದರು. ವಾರ್ಷಿಕೋತ್ಸವದ ಸಮಾರಂಭದಲ್ಲಿ ಕಳೆದ ತಿಂಗಳು ನಡೆಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪರಿಷತ್ತಿನ ಸದಸ್ಯರಿಂದ ಹಾಗೂ ಬ್ರಾಹ್ಮಣ ಬಳಗದವರಿಂದ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷರು ಹಾಗೂ ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ ಇದರ ಗೌರವಾಧ್ಯಕ್ಷರೂ ಆಗಿರುವ ಶ್ರೀ ವೈ. ಸುಧಾಕರ ಭಟ್, ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀ ಸೌಜನ್ಯ ಉಪಾಧ್ಯಾಯ, ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಜನಾರ್ಧನ ರಾವ್ ಇಡ್ಯಾ ಮುಂತಾದ ಅನೇಕ ಗಣ್ಯರು ಭಾಗವಹಿಸಿದ್ದರು. ಇತ್ತೀಚೆಗೆ ನಡೆದ ಭರತನಾಟ್ಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದುಷಿ ಕು. ಅದಿತಿ ಕಾರಂತ ಇವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷದ ಪದವಿಪೂರ್ವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಪರಿಷತ್ತಿನ ಪೂರ್ವದ್ಯಕ್ಷರಾದ ಶ್ರೀ ಶ್ರೀಪತಿ ಬಾಯರ್ ಹಾಗೂ ಶ್ರೀ ರಾಘವೇಂದ್ರ ಉಪಾಧ್ಯಾಯ ನೆಕ್ಲಾಜೆ ಹಾಗೂ ಶ್ರೀ ರಾಜೇಶ್ ನಡ್ಯಂತಿಲ್ಲಾಯ ಇವರನ್ನು ಗೌರವಿಸಲಾಯಿತು. ಪರಿಷತ್ತಿನ ಹಿರಿಯ ಮಹಿಳಾ ಸದಸ್ಯೆ ಶ್ರೀಮತಿ ಗಾಯತ್ರಿ ಕೃಷ್ಣಮೂರ್ತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀ ಕೃಷ್ಣ ಭಟ್ ಹಾಗು
ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು, ದಾನಿಗಳು , ಪ್ರಾಯೋಜಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಶಾರ್ವರಿ ಉಪಾಧ್ಯಾಯ, ಡಾ. ಮಾನಸ ಮುಗೆರಾಯ ನಿರ್ವಹಿಸಿದರು. ಡಾ. ಶ್ರೀ ರಾಮ್ ಮುಗೆರಾಯರವರು ಪ್ರಶಸ್ತಿ ವಿಜೇತರ ಹೆಸರನ್ನು ವಾಚಿಸಿದರು. ಶ್ರೀಮತಿ ಅನುರಾಧ ಉಡುಪರವರು ಸನ್ಮಾನಿತರ ಪರಿಚಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀ ರಮೇಶ್ ರಾವ್ ಬಿ ಇವರು ಸ್ವಾಗತಿಸಿ, ಕು. ಅದಿತಿ ಕಾರಂತ್ ಇವರು ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page