ಎಲ್ಲರೂ ಪ್ರತ್ಯರ್ಥ ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಮನವಿ

ಕಾರ್ಕಳದ ಸ್ಥಳೀಯ ಯುವ ಉತ್ಸಾಹಿ ಪ್ರತಿಭಾವಂತ ಸಿನೇಮಾ ಕಲಾವಿದರು ಪ್ರಮುಖ ಪಾತ್ರದಲ್ಲಿರುವ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ “ಪ್ರತ್ಯರ್ಥ” ಸಿನೇಮಾವನ್ನು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಪಡುಬಿದ್ರಿಯ ಭಾರತ್ ಸಿನೇಮಾಸ್ ಚಿತ್ರಮಂದಿರದಲ್ಲಿ ವೀಕ್ಷಿಸಿದರು.
ಸಿನೇಮಾ ವೀಕ್ಷಣೆಯ ನಂತರ ಮಾತನಾಡಿದ ಉದಯ ಶೆಟ್ಟಿ ಮುನಿಯಾಲು ಅವರು, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಕುಟುಂಬ ಸಮೇತರಾಗಿ ವೀಕ್ಷಿಸ ಬಹುದಾದಂತಹ ಒಂದು ಸುಂದರವಾದ ಚಲನಚಿತ್ರವನ್ನು ನಮ್ಮ ಕಾರ್ಕಳದ ಯುವ ಉತ್ಸಾಹಿ ಚಿತ್ರತಂಡ ಕಟ್ಟಿಕೊಟ್ಟಿದೆ, ಪ್ರತ್ಯರ್ಥ ಸಿನೇಮಾವು ತನ್ನ ಕುತೂಹಲಕಾರಿ ಕಥೆಯ ಮೂಲಕ ವೀಕ್ಷಕರನ್ನು ಸಿನೇಮಾದ ಕೊನೆಯ ತನಕವೂ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ, ಕಾರ್ಕಳದ ಯುವ ನಟರಾದ ಅಕ್ಷಯ್ ಕಾರ್ಕಳ ಅವರ ಪ್ರಬುದ್ದ ನಟನೆ, ಹಾಗೂ ಅವರ ತಂಡದ ಎಲ್ಲಾ ಕಲಾವಿದರ ಅತ್ಯುತ್ತಮ ನಟನೆಯು ಚಿತ್ರಕ್ಕೆ ಹೆಚ್ಚಿನ ಮೆರಗುನ್ನು ನೀಡಿದೆ, ನಮ್ಮ ಕಾರ್ಕಳದ ಪ್ರತಿಭಾವಂತರು ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು, ಆ ಮೂಲಕ ಕಾರ್ಕಳದ ಕೀರ್ತಿ ಪತಾಕೆಯನ್ನು ರಾಜ್ಯದಾದ್ಯಂತ ಎತ್ತಿ ಹಿಡಿಯಬೇಕು, ಹಾಗಾಗಿ ಕಾರ್ಕಳದ ಎಲ್ಲಾ ಸಜ್ಜನ ಬಂಧುಗಳು ಪ್ರತ್ಯರ್ಥ ಸಿನೇಮಾವನ್ನು ವೀಕ್ಷಿಸಿ ನಮ್ಮ ಕಾರ್ಕಳದ ತಂಡವನ್ನು ಗೆಲ್ಲಿಸಿ ಎಂದು “ಉದಯ ಶೆಟ್ಟಿ ಮುನಿಯಾಲು” ಅವರು ತಮ್ಮ ಮಾತುಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರತ್ಯರ್ಥ ಸಿನೇಮಾದ ನಾಯಕ ನಟರಾದ “ಅಕ್ಷಯ್ ಕಾರ್ಕಳ”, ಸಹ ನಟರಾದ ಯೋಗೀಶ್ ಶೆಟ್ಟಿ ನಂದಳಿಕೆ, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಸಂತೋಷ್ ದೇವಾಡಿಗ ಬೋಳ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಪ್ರದೀಪ್ ಬೇಲಾಡಿ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.



















